ಮುಷ್ಕರ ಸಾರಿಗೆ ಆರಂಭಿಸಲು ಸಾರ್ವಜನಿಕರ ಆಗ್ರಹ

????????????????????????????????????????????????????????????????????????????????????????????????????????????????????????????????????????????????????????????????????????????????????????

ಬಾದಾಮಿ,ಏ8: ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗದಂತೆ ವೇತನ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ. ಬಿ.ಎಂ.ಟಿ.ಸಿ.ಮತ್ತು ಕೆ.ಎಸ್.ಆರ್.ಟಿ.ಸಿ.ಯಲ್ಲಿ ಕೆಲಸ ಮಾಡುತ್ತಿರುವ 1ಲಕ್ಷ 30 ಸಾವಿರ ನೌಕರರು ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ.
ಸಾರಿಗೆ ಸಂಚಾರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಳಿಗ್ಗೆಯಿಂದ ವಿವಿದ ಗ್ರಾಮ, ನಗರಗಳಿಗೆ, ಕೂಲಿ ಕೆಲಸಕ್ಕೆ, ನೌಕರರು ಕರ್ತವ್ಯ ಹಾಜರಾಗಲು ತೆರಳಲು ಬಸ್ ಸಂಚಾರ ಇಲ್ಲದೇ ಪರದಾಡುವಂತಾಯಿತು. ಕೆಲವರು ಸ್ವಂತ ದ್ವಿಚಕ್ರವಾಹನ ಮೂಲಕ ತೆರಳಿದರು. ಇನ್ನು ಕೆಲವರು ಟಿಂಪೆÇ,ಅಟೋ, ಮ್ಯಾಕ್ಸಿ ಕ್ಯಾಬ್ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಯಿತು. ಹೆಚ್ಚಿನ ಪ್ರಯಾಣದರ ಪಡೆಯುತ್ತಿರುವುದಾಗಿ ಪ್ರಯಾಣಿಕರು ತಿಳಿಸಿದರು.
ಸರಕಾರದವರು ಮುಷ್ಕರ ನಡೆಯದಂತೆ ನೌಕರರ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬಹುದಾಗಿತ್ತು. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಕೆಂದೂರ ಗ್ರಾಮದ ಪ್ರಯಾಣಿಕ ಸಿದ್ದಪ್ಪ ತಿಳಿಸಿದರು. ಸರಕಾರ ಕೂಡಲೇ ಸಮಸ್ಯೆ ಬಗೆಹರಿಸಿ ಸಾರಿಗೆ ಸಂಚಾರ ಆರಂಭಿಸಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.