ಮುಷ್ಕರಕ್ಕೆ ಸಹಕರಿಸಲು ರಾಜು ಲೇಂಗಟಿ ಮನವಿ

ಕಲಬುರಗಿ,ಫೆ.28; ರಾಜ್ಯ ಸರ್ಕಾರಿ ನೌಕರರಿಗೆ ವೇತನ ಭತ್ಯೆ ಪರಿಷ್ಕರಣೆ ಮತ್ತು ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಇದೇ ಮಾರ್ಚ್ 1 ರಿಂದ ಕಚೇರಿಗೆ ಗೈರಾಗುವ ಮೂಲಕ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಸಹಕರಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ನೇತೃತ್ವದ ನೌಕರರ ಸಂಘ ಮಂಗಳವಾರ ವಿವಿಧ ಕಚೇರಿಗೆ ಬೇಟಿ ನೀಡಿ ನೌಕರರಲ್ಲಿ ಮನವಿ ಮಾಡಿತು.
ಇದೇ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಅಧಿಕಾರಿ-ಸಿಬ್ಬಂದಿಗಳಿಗೆ ಕರಪತ್ರ ನೀಡಲಾಯಿತು. ಅಲ್ಲದೆ ಕಚೇರಿ ಸೂಚನಾ ಫಲಕದಲ್ಲಿಯೂ ಅಂಟಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ನಿಜಲಿಂಗಪ್ಪ ಕೊರಳ್ಳಿ, ಚಂದ್ರಕಾಂತ ಏರಿ, ತುಕಾರಾಮ ಕೊರಿಗೆ ಸತೀಷ್ ಜೋಷಿ, ಮಡಿವಾಳಪ್ಪ ನಾಗರಹಳ್ಳಿ, ಆನಂದಕುಮಾರ ಬಾಸೂತಕರ್, ಸಿದ್ದಪ್ಪ ಭಾಸಗಿ, ಜಯಶೀಲನ್, ಸಂತೋಷ ಕುಸುಮಾ, ಶಿವಾನಙದ ಹೌದೆ, ರಾಚಣ್ಣಾ, ಬಸವರಾಜ ನೆಲೋಗಿ ಮುಂತಾದವರು ಇದ್ದರು.