ಮುದ್ದೇಬಿಹಾಳ:ಜೂ.3: ವಿಜಯಪುರದ ಮುಸ್ಲಿಂ ಮುಖಂಡ ಹಮೀದ ಮುಶ್ರೀಫ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಪಟ್ಟಣದ ಮುಸ್ಲಿಂ ಸಮಾಜದ ಹಿರಿಯ ಮುಖಂಡ ಅಯ್ಯುಬ ಮನಿಯಾರ ಅವರು ಮುಖ್ಯಮಂತ್ರಿ ಸಿದ್ರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ ಅವರಿಗೆ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಸಧ್ಯ ರಾಜ್ಯದಲ್ಲಿ 135 ಸ್ಥಾನಗಳಲ್ಲಿ ಭರ್ಜರಿ ಗೆಲುವುಸಾಧಿಸಿದೆ ಎಂದರೆ ಮುಸ್ಲಿಂ ಸಮಾಜದ ಪಾತ್ರ ಬಹು ಮುಖ್ಯವಾಗಿದೆ ಅದರಂತೆ ಸಮಗ್ರ ವಿಜಯಪುರ ಜಿಲ್ಲೆಯ ಎಂಟು ವಿಧಾನ ಸಭಾ ಮತಕ್ಷೇತ್ರದಲ್ಲಿ 6 ಸ್ಥಾನಗಳಲ್ಲಿ ಕಾಂಗ್ರೇಸ್ ಜಯಭೇರಿ ಬಾರಿಸಿದೆ ಕಾರಣ ಮುಸ್ಲಿಂ ಸಮಾಜದ ಕೊಡುಗೆ ಅಪಾರವಾಗಿದೆ.
ಸಧ್ಯ ವಿಜಯಪುರ ನಗರ ಮತಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮುಸ್ಲಿಂ ಸಮಾಜದ ಮುಖಂಡ ಹಮೀದ ಮುಶ್ರೀಫ್ ಅವರು ಕೆಲವರ ಕುತಂತ್ರಕ್ಕೆ ಕೆಲವೇ ಮತಗಳ ಅಂತದಿಂದ ಪರಾಭವನಗೊಂಡಿರುವ ನೋವನ್ನುಂಟು ಮಾಡಿದೆ. ಇಸದು ಎರಡನೇ ಬಾರಿ ಈ ರೀತಿ ಪರಾಭವಗೊಂಸಡಿದ್ದರಿಂದಾಗಿ ಪ್ರಭಲ ಮುಸ್ಲಿಂ ಸಮಾಜದ ಸ್ಥಾನ ಮಾನಕ್ಕೆ ಅನ್ಯಾಯವಾದಂತಾಗಿದೆ ಜೊತೆಗೆ ಮುದ್ದೇಬಿಹಾಳ ಮತಕ್ಷೇತ್ರದ ಸರಳ ಸಜ್ಜನಕೆ ವ್ಯಕ್ತಿತ್ವದ ಸಾಪ್ಟ್ ರಾಜಕಾರಿಣಿ ಸಿ ಎಸ್ ನಾಡಗೌಡ ಅವರನ್ನು ಸಹಿತಿ ಸಚಿವರನ್ನಾಗಿ ಮಾಡದೇ ಮತಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದಂತಾಗಿದೆ ಈ ಹಿನ್ನೇಲೆಯಲ್ಲಿ ಸಚೀವರಾದ ಎಂ ಬಿ ಪಾಟೀಲರು ಮದ್ಯಸ್ಥಿಕೆ ವಹಿಸಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರವರೊಂದಿಗೆ ಸಮಾಲೋಚನೆ ನಡೆಸಿ ಮುಂಬರುವ ದಿನಗಳಲ್ಲಿ ವಿಜಯಪುರದ ಮುಸ್ಲಿಂ ಮುಖಂಡ ಹಮೀದ ಮುಶ್ರೀಫ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರನ್ನು ಕ್ಯಾಬಿನೇಟ್ ದರ್ಜೇ ಸಚೀವರನ್ನಾಗಿ ಮಾಡಿ ಗೌರವಿಸಬೇಕು ಇಲ್ಲವಾದಲ್ಲಿ ಮುಂಬರು ಎಲ್ಲ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ದಾದಾ ಎತ್ತಿಮನಿ, ಅಂಜುಮನ್ ಇಸ್ಲಾಂ ಎ ಕಮೀಟಿ ಮಾಜಿ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ, ಮಹಿಬೂಬ ನಾಲತವಾಡ, ಜಬ್ಬಾರ ಗೊಲಂದಾಜ, ಖಾಜಿ ಮೋಲಾನಾ, ತಾಲೂಕಾ ಯೂಥ್ ಕಾಂಗ್ರೇಸ್ ಅಧ್ಯಕ್ಷ ರಫೀಕ ಶಿರೋಳ, ನ್ಯಾಯವಾದಿ ಎನ್ ಆರ್ ಮೋಕಾಸಿ ಸೇರಿದಂತೆ ಹಲವರು ಇದ್ದರು.