ಮುಳ್ಳು ಕಂಟಿ ಗಿಡಗಳನ್ನು ತೆರವುಗೊಳಿಸಿ

ಅಫಜಲಪುರ:ಜೂ.28: ತಾಲೂಕಿನ ಜೇವರ್ಗಿ(ಕೆ) ಗ್ರಾಮದ ರಸ್ತೆ ಬದಿಯ ಎರಡು ಕಡೆ ಮುಳ್ಳು ಕಂಟಿಗಳು ಬೆಳೆದಿರುವುದರಿಂದ ಬಸ್ಸಿನ ಸೈಡ್ ಮಿರರ್ ಹಾಗೂ ಕಿಟಕಿಯ ಗ್ಲಾಸ್ ಗಳು ಒಡೆಯುತ್ತಿವೆ ಎಂದು ಘಟಕ ವ್ಯವಸ್ಥಾಪಕ ಎ.ವಿ ಬೋವಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಸ್ತೆಯ ಎರಡು ಬದಿಯಲ್ಲಿ ಮುಳ್ಳು ಕಂಟಿಗಳು ಬೆಳೆದಿರುವ ಕಾರಣ ನಮ್ಮ ಸಿಬ್ಬಂದಿಗಳು ಆ ಮಾರ್ಗದಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಜೇವರ್ಗಿ(ಬಿ) ಗ್ರಾಮದ ರಸ್ತೆ ಸರಿ ಇಲ್ಲದ ಕಾರಣ ವಾಹನಗಳು ಸ್ಕಿಡ್ ಆಗುವ ಸಾಧ್ಯತೆ ಇದೆ. ಈಗಾಗಲೇ ಸಂಬಂಧಪಟ್ಟ ಗ್ರಾಮ ಪಂಚಾಯತ್ ನವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು ಸಮಸ್ಯೆಯನ್ನು ಸರಿಪಡಿಸಿಲ್ಲ. ಹೀಗಾಗಿ ಕೂಡಲೇ ರಸ್ತೆ ಸರಿಪಡಿಸಬೇಕು ಮತ್ತು ರಸ್ತೆಯ ಎರಡು ಭಾಗದಲ್ಲಿ ಬೆಳೆದಿರುವ ಮುಳ್ಳುಕಂಟಿ ಗಿಡಗಳನ್ನು ತೆರವುಗೊಳಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.