ಮುಳ್ಳುಹಂದಿ ಜೊತೆಕಾದಾಟ ಬಂಡಿಪುರದಲ್ಲಿ ಹುಲಿ ಸಾವು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.02- ಮುಳ್ಳುಹಂದಿ ಜೊತೆಕಾದಾಟದಲ್ಲಿ ಹುಲಿಯೊಂದು ಸಾವನ್ನಪ್ಪಿರುವ ಘಟನೆಗುಂಡ್ಲುಪೇಟೆ ಉಪ ವಿಭಾಗದ ಬಂಡೀಪುರ ಹುಲಿಯೋಜನೆ ಮದ್ದೂರು ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಮದ್ದೂರು ಗಸ್ತು,ಸೀಗನಬೆಟ್ಟ ಸರ್ಕಲ್‍ರಸ್ತೆ ಬಳಿ ಸಿಬ್ಬಂದಿಗಳು ಫೆ.01ರಂದು ಬೆಳಗ್ಗೆಗಸ್ತು ನಡೆಸುತಿದ್ದ ಸಮಯ ಹುಲಿಯೊಂದು ಮೃತ ಪಟ್ಟಿರುವುದನ್ನು ಗಮನಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದತಕ್ಷಣ ಬಂಡೀಪುರ ಹುಲಿಯೋಜನೆಯಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರಾದಡಾ|| ಪಿ ರಮೇಶ್‍ಕುಮಾರ್, ಉಪ ವಿಭಾಗದ ಸಹಾಯಕಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರ, ಮದ್ದೂರು ವಲಯದ ವಲಯಅರಣ್ಯಾಧಿಕಾರಿ ಬಿ.ಎಂ ಮಲ್ಲೇಶ್, ಇಲಾಖಾ ಪಶುವೈಧ್ಯಾಧಿಕಾರಿಡಾ|| ಮಿರ್ಜಾ ವಾಸೀಂ ಹಾಗೂ ಇಲಾಖಾಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ 03-04 ವರ್ಷ ಪ್ರಾಯದಗಂಡುಹುಲಿಯು ಸತ್ತು ಬಿದ್ದಿರುವುದುಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಹುಲಿಯ ಹೊಟ್ಟೆಯಒಳಭಾಗದಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಕಂಡುಬಂದಿದ್ದು ಹೊಟ್ಟೆಯ ಒಳ ಭಾಗದಲ್ಲಿ ಮುಳ್ಳುಗಳುಚುಚ್ಚಿರಕ್ತ ಸ್ರಾವವಾಗಿ ಹುಲಿಯು ಮೃತಪಟ್ಟಿರುತ್ತದೆಎಂದು ಇಲಾಖಾ ಪಶುವೈಧ್ಯಾಧಿಕಾರಿಗಳು ತಿಳಿಸಿರುತ್ತಾರೆ.