ಮುಳುಗುತ್ತಿರುವ ವ್ಯಕ್ತಿಯ ರಕ್ಷಣೆ ಓಡಿದ ಆನೆ

ನವದೆಹಲಿ, ಜು ೧೭- ಇಡೀ ಪ್ರಾಣಿ ಸಾಮ್ರಾಜ್ಯದಲ್ಲಿ ಆನೆಗಳನ್ನು ಅತ್ಯಂತ ಬುದ್ಧಿವಂತ ಜಾತಿ ಎಂದು ಪರಿಗಣಿಸಲಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಜೀವವನ್ನು ಉಳಿಸಿದ ಆನೆಯ ಹಳೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ, ನದಿಯಲ್ಲಿ ವ್ಯಕ್ತಿಯೊಬ್ಬರು ಅಸಹಾಯಕರಾಗಿ ಸಹಾಯಕ್ಕಾಗಿ ಸನ್ನೆ ಮಾಡುತ್ತಾ ಮುಳುಗುತ್ತಿರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಆನೆಗಳ ಹಿಂಡು ಅದೇ ನದಿಯನ್ನು ದಾಟಲು ಯತ್ನಿಸುತ್ತಿವೆ. ಇದ್ದಕ್ಕಿದ್ದಂತೆ, ಮರಿ ಆನೆಯೊಂದು ಮನುಷ್ಯನನ್ನು ರಕ್ಷಿಸಲು ಧಾವಿಸುತ್ತದೆ, ನೀರಿನಲ್ಲಿ ಆತನ ಸಹಯಾಕ್ಕಾಗಿ ತನ್ನ ಸೊಂಡಿಲನ್ನು ನೀಡುವ ದೃಶ್ಯಗಳು ಮತ್ತೆ ಜನರ ಹೃದಯ ಗೆದ್ದಿದೆ.
ಮೂಲತಃ ೨೦೧೬ ರಲ್ಲಿ ’ಎಲಿಫೆಂಟ್‌ನ್ಯೂಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಆನೆಯ ಸಿಹಿ ಗೆಸ್ಚರ್‌ಗೆ ಜನರನ್ನು ಫಿದಾ ಆಗಿದ್ದಾರೆ.
ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ಟ್ವಿಟರ್ ಬಳಕೆದಾರರು, “ಪ್ರಾಣಿಗಳು ಅದ್ಭುತವಾಗಿದೆ” ಎಂದು ಬರೆದಿದ್ದಾರೆ.ವರದಿಯ ಪ್ರಕಾರ, ಈ ಘಟನೆಯು ೨೦೧೬ ರಲ್ಲಿ ಥೈಲ್ಯಾಂಡ್‌ನ ಎಲಿಫೆಂಟ್ ನೇಚರ್ ಪಾರ್ಕ್‌ನಲ್ಲಿ ನಡೆದಿತ್ತು.