ಮುಳುಗಡೆ ಸೇತುವೆ ಮೇಲೆ ಬಸ್ ಚಾಲನೆ ಸೃಷ್ಟಿಸಿದ ಅತಂಕ

ವಿಜಯಪುರ,ಆ೬:ವಿಜಯಪುರ ಜಿಲ್ಲೆಯ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ ಇಲ್ಲಿನ ಸೇತುವೆ ಮುಳುಗಡೆಯಾಗಿದ್ದು,ಈ ಸೇತುವೆ ಮೇಲೆ ಬಸ್ ಚಲಾಯಿಸಿ ಸರ್ಕಾರಿ ಬಸ್ ಚಾಲಕ ದುಸ್ಸಾಹಸ ಮೆರೆದಿದ್ದಾನೆ.
ಭಾರಿ ಮಳೆಯಿಂದಾಗಿ ಮುಳುಗಡೆಯಾಗಿದ್ದ ಸೇತುವೆ ಮೇಲೆ ಸರ್ಕಾರಿ ಬಸ್ ಚಾಲಕನೊಬ್ಬ ಬಸ್ ಚಲಾಯಿಸಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಸೇತುವೆಯಲ್ಲಿ ನಡೆದಿದೆ.ಇಲ್ಲಿನ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ ಇಲ್ಲಿನ ಸೇತುವೆ ಮುಳುಗಡೆಯಾಗಿದೆ. ಈ ಸೇತುವೆಯ ಮೇಲೆ ಬಸ್ ಚಲಾಯಿಸಬೇಡ ಎಂದು ಗ್ರಾಮಸ್ಥರು ಹೇಳಿದರೂ ಬಸ್ ಚಾಲಕ ಅದನ್ನು ಲೆಕ್ಕಿಸದೇ ಬಸ್ ಚಲಾಯಿಸಿ ದುಸ್ಸಾಹಸ ಮೆರೆದಿದ್ದಾನೆ. ಒಂದು ಹಂತದಲ್ಲಿ ಬಸ್ ನದಿಗೆ ವಾಲಿದ್ದು,ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಈ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ