
ಕೋಲಾರ, ಮೇ,೩-ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ವಿ.ಆದಿನಾರಾಯಣ, ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉಡುಗೊರೆಯಾಗಿ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಮುಳಬಾಗಿಲಿನ ನೇತಾಜಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಆದಿನಾರಾಯಣ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಮುಳಬಾಗಿಲು-ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಅಲೆ ಬೀಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರಗಳು ಭ್ರಷ್ಟಾಚಾರದಿಂದ ಕೂಡಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ನೀಡಬೇಡಿ ಕಾಂಗ್ರೆಸ್‌ನ ೫ ಗ್ಯಾರಂಟಿಗಳನ್ನು ನಾವು ಅಧಿಕಾರ ಹಿಡಿದ ಮೇಲೆ ಅನುಷ್ಟಾನಕ್ಕೆ ತರುತ್ತೇವೆಂದು ಭರವಸೆ ನೀಡಿದರು.ಜೆಡಿಎಸ್‌ನ ಕುಮಾರಸ್ವಾಮಿಗೆ ಒಂದು ಬಾರಿ ಅವಕಾಶ ನೀಡಿದ್ದವು, ಆದರೆ ಅವರು ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲ್ಲ ಎಂದು ಟೀಕಿಸಿದರಲ್ಲದೆ ಜೆಡಿಎಸ್‌ಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.ಡಿಕೆಶಿ ಬಾಷಣ ಮಾಡುತ್ತಿದ್ದಾಗ ದಾನ ಧರ್ಮಗಳನ್ನು ಮಾಡುವುದರಲ್ಲಿ ಎತ್ತಿದ ಕೈ ಎಂದು ಹೇಳಿ ಕೊತ್ತೂರು ಮತ್ತು ಆದಿನಾರಾಯಣ ಈ ಇಬ್ಬರ ಕೈಗಳನ್ನು ಹಿಡಿದು ಮೇಲಕ್ಕೆ ಎತ್ತಿ ಪ್ರದರ್ಶಿಸಿದರು
ಬೆಂಗಳೂರಿನಿಂದ ಮುಳಬಾಗಿಲುಗೆ ಬರುತ್ತಿದ್ದಾಗ ನಾನು ಕುಳಿತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಡಿಕ್ಕಿಹೊಡೆದು ಗ್ಲಾಸ್ ಹೊಡೆದುಹೋಯಿತು ನಾನು ಸತ್ತು ಬದುಕಿ ಮುಳಬಾಗಿಲಿಗೆ ಬಂದಿದ್ದೇನೆ, ಇಲ್ಲಿ ಆದಿನಾರಾಯಣ ಅಭ್ಯರ್ಥಿ ನಾನು ಮತ್ತು ಕೊತ್ತೂರು ಅಭ್ಯರ್ಥಿಯೆಂದು ಭಾವಿಸಿ ಚುನಾವಣೆಯಲ್ಲಿ ಅಧಿಕಮತಗಳಿಂದ ಗೆಲ್ಲಿಸಿ ಶಾಸಕರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು. ಜೆಡಿಎಸ್‌ನ ತೆನೆ ಹೊಲದಲ್ಲಿ ಇರಲಿ ಬಿಜೆಪಿಯ ಕಮಲ ಕೊಳದಲ್ಲಿ ಇರಲಿ ಕೈ ಮಾತ್ರ ಅಧಿಕಾರದಲ್ಲಿ ಇರುವಂತೆ ಕಾರ್ಯಕರ್ತರು ಶ್ರಮಿಸಬೇಕೆಂದು ಕಿವಿಮಾತು ಹೇಳಿದರಲ್ಲದೆ ಆದಿನಾರಾಯಣ ಗೋವಿಂದ ಗೋವಿಂದ ಎಂದು ಸಂಭೋಧಿಸಿದರಲ್ಲದೆ ಮುಳಬಾಗಿಲು ದೋಸೆ ಎಂದರೆ ನನಗೆ ತುಂಬ ಇಷ್ಟ ಮತ್ತೊಮ್ಮೆ ಮುಳಬಾಗಿಲಿಗೆ ಬರುತ್ತೇನೆಂದು ತಮ್ಮ ಭಾಷಣವನ್ನು ಮುಗಿಸಿದರು.ಕೊತ್ತೂರು ಮಂಜುನಾಥ್ ಮಾತನಾಡಿ, ೨೦ ವರ್ಷಗಳ ಕಾಲ ಯಾವ ರೀತಿ ನನ್ನನ್ನು ಕಾಪಾಡಿಕೊಂಡು ಬಂದಿದ್ದಿರೋ ಅದೇ ರೀತಿ ಆದಿನಾರಾಯಣ ರವರನ್ನು ಸಹ ಕಾಪಾಡಬೇಕು ಅವರನ್ನು ಶಾಸಕರನ್ನಾಗಿ ಮಾಡಿ ಮಾನ ಮರೆಯಾದೆ ಉಳಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ವಿ.ಆದಿ ನಾರಾಯಣ, ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠೇಗೌಡ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ರಾಮಲಿಂಗಾರೆಡ್ಡಿ, ಆಲಂಗೂರು ಶಿವಣ್ಣ, ಡಾ.ವಜಾಹತುಲ್ಲಾಖಾನ್, ರಾಜೇಂದ್ರಗೌಡ, ಮುಳಬಾಗಿಲು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಮಾನುಲ್ಲ, ಕಾರ್ ಶ್ರೀನಿವಾಸ್, ಕಗ್ಗಿನಹಳ್ಳಿ ಶ್ರೀನಿವಾಸ್, ಸುಹಾಸ್ ಶೆಟ್ಟಿ, ಇದ್ದರು.