ಮುರ್ಮು ಗೆಲವು-ವಿಜಯೋತ್ಸವ

ಆನೇಕಲ್,ಜು. ೨೩ ಭಾರತ ದೇಶದ ರಾಷ್ಟ್ರಪತಿ ಹುದ್ದೆಗೆ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ನೂತನವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜಿಗಣಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಜೊತೆಗೆ ಬಿಜೆಪಿ ವರಿಷ್ಠರಿಗೆ ಜೈಕಾರ ಹಾಲುವ ಮುಖೇನ ವಿಜಯೋತ್ಸವವನ್ನು ಆಚರಣೆ ಮಾಡಿದರು.
ಇನ್ನು ಕಾರ್ಯಕ್ರಮದ ನೇತೃತ್ವವನ್ನು ಜಿಗಣಿ ಪುರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಜಿಗಣಿ ಪುನೀತ್ ರವರು ವಹಿಸಿದ್ದರು, ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಗಿರೀಶ್, ಪ್ರವೀಣ್, ದೀಪು, ಶಿವರಾಜ್, ರಾಮಚಂದ್ರಪ್ಪ, ರಾಜಣ್ಣ, ನಾಗೇಶ್, ಅಪ್ಪಯ್ಯಣ್ಣ, ಹೇಮಂತ್, ನವೀನ್, ಮೋಹನ್, ಜೆ.ಸಿ. ಕೃಷ್ಣಪ್ಪ, ವೆಂಕಟೇಶ್, ಮೈಕೋ ನಾಗರಾಜ್, ನರೇಂದ್ರ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.