ಮುರುಳಿಗೆ ಖುಷಿ ನೀಡಿದ ಭೂತಾತ್ಮ

ನೃತ್ಯ ನಿರ್ದೇಶಕರಾಗಿ ಗಮನ ಸೆಳೆದಿದ್ದ ಮುರುಳಿ ನಿರ್ದೇಶನ ಮಾಡಿದ್ದ “ನಮೋ ಭೂತಾತ್ಮ” ಚಿತ್ರ 25 ದಿನ ಪೂರ್ಣಗೊಳಿಸಿ ಮುನ್ನೆಡಿದಿದೆ. ಇದು ಸಹಜವಾಗಿಯೇ ನಿರ್ದೇಶಕ ಮುರುಳಿ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕನ್ನಡದಲ್ಲಿ ಡಿಜಿಟಲ್ ಹಕ್ಕು ಮಾರಾಟವಾಗಿದ್ದು, ಹಿಂದಿ ಡಬ್ಬಿಂಗ್ ಹಕ್ಕಿನ ಮಾತುಕತೆ ನಡೆಯುತ್ತಿದೆ, ಅದು ಆದರೆ ಹೆಚ್ಚು ಕಡಿಮೆ ಚಿತ್ರ ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸ್ ತಂದುಕೊಡಲಿದೆ.ಈ ಮದ್ಯೆ 6ನೇ ವಾರದಲ್ಲಿ ಚಿತ್ರ ಮುನ್ನೆಡೆಯುತ್ತಿದೆ.

ಚಿತ್ರದ ಯಶಸ್ವಿಯಲ್ಲಿ ಮುನ್ನೆಡೆಯುತ್ತಿರುವ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಮುರುಳಿ, ಅಡೆತಡೆ ದಾಟಿ 25 ದಿನ ಪೂರ್ಣಗೊಳಿದೆ. ಇದು ಸಹಜವಾಗಿ ಖುಷಿ ಕೊಟ್ಟಿದೆ. ಚಿತ್ರದ ಮುಂದುವರಿದ ಭಾಗ ಮಾಡುವ ಉದ್ದೇಶವೂ ಇದೆ. ಅದಕ್ಕೆಂದೇ ಚಿತ್ರದಲ್ಲಿ ಲೀಡ್ ಕೂಡ ಕೊಡಲಾಗಿದೆ. ಆದರೆ ಸದ್ಯಕ್ಕೆ ನಿರ್ಮಾಣ ಮಾಡುವುದಿಲ್ಲ ಎನ್ನುವ ಮಾಹಿತಿ ಹಂಚಿಕೊಂಡರು.

ಅದಕ್ಕೂ ಮೊದಲು ಮೂರು ನಾಲ್ಕು ಕಥೆಗಳು ಇವೆ. ಅದರಲ್ಲಿ ಒಂದು ಪ್ರೇಮಕತೆ, ಮತ್ತೊಂದು ನಾಯಕಿ ಪ್ರಧಾನವಾದದ್ದು ಇನ್ನೊಂದು ಪ್ರಮುಖ ಕಥೆ ಇದೆ. ಇನ್ನೊಂದು ತಿಂಗಳ ನಂತರ ಚಿತ್ರದ ಕತೆ ಅಂತಿಮ ಮಾಡಿ ಚಿತ್ರೀಕರಣಕ್ಕೆ ತೆರಳುತ್ತೇವೆ. ನಾವು ನಿರ್ಮಾಣ ಮಾಡಬೇಕಾ ಅಥವಾ ಬೇರೆಯವರು ಮುಂದೆ ಬಂದಿದ್ದಾರೆ. ಯಾರು ನಿರ್ಮಾಣ ಮಾಡಲಿದ್ದಾರೆ ಎನ್ನುವುದು ತಿಳಿಯಲಿದೆ ಎಂದರು.

ಯಶವಂತ ಚಿತ್ರದಿಂದ ನೃತ್ಯ ನಿರ್ದೇಶಕರಾಗಿ ಚಿತ್ರರಂಗದಲ್ಲಿ ನೃತ್ಯ ನಿರ್ದೇಶನ ಆರಂಭವಾದ ಬಳಿಕ ಇಲ್ಲಿಯವರೆಗೆ 600ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದೇನೆ ಎಲ್ಲಾ ಪ್ರಮುಖ ನಾಯಕ ನಟರಿಗೆ ತಲಾ ಐದಾರು ಚಿತ್ರಗಳಲ್ಲಿ ಕೆಲಸ ಮಾಡಿ ಯಶಸ್ವಿ ಹಾಡು ನೀಡಿದ್ದೇನೆ ಎನ್ನುವ ಮಾಹಿತಿ ಹಂಚಿಕೊಂಡರು.