ಮುರುಘೇಶನ ಲೀಲೆ ಎಂದ ಬಸವರಾಜನ್

ಚಿತ್ರದುರ್ಗ,ನ.೧೩- ಮುರುಘಾಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸುವ ಪಿತೂರಿ ನಡೆದಿದೆ ಎಂಬ ದೂರಿನ ಸಂಬಂಧ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರನ್ನು ತೀವ್ರ ವಿಚಾರಣೆ ನಡೆಸಲಾಗಿದೆ. ಆದರೆ ವಿಚಾರಣೆ ವೇಳೆ ಬಸವರಾಜನ್ ಪೊಲೀಸರ ಪ್ರಶ್ನೆಗೆ ಒಂದೇ ಉತ್ತರ ನೀಡುತ್ತಿದ್ದು, ಇದೆಲ್ಲವೂ ‘ಮುರುಘೇಶ ಮಾಡಿಸಿದ್ದು’ ಎನ್ನುತ್ತಿದ್ದಾನೆ. ಎಲ್ಲವೂ ‘ಮುರುಘೇಶನ ಲೀಲೆ’ ಎಂದು ಮಠದ ದೈವದ ಮೇಲೆ ಹೇಳುತ್ತಿದ್ದಾನೆ. ನಾನೇನು ಪಿತೂರಿ ಮಾಡಿಲ್ಲ ಎಂದಿದ್ದಾನೆ.ನಾಳೆಗೆ ಎಸ್.ಕೆ.ಬಸವರಾಜನ್ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ನ. ೯ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಮಠದ ಉಸ್ತುವಾರಿ ಬಸವಪ್ರಭುಶ್ರೀಗಳು ಎಸ್.ಕೆ.ಬಸವರಾಜನ್ ವಿರುದ್ಧ ದೂರು ನೀಡಿದ್ದರು.
ಸ್ವಾಮೀಜಿ ವಿರುದ್ಧ ಈಗಾಗಲೇ ಎರಡು ಪೋಕ್ಸೋ ಕೇಸ್ ದಾಖಲಾಗಿವೆ. ಈ ಎರಡು ಕೇಸ್ ಸಂಬಂಧ ಪೊಲೀಸರು ಸಂತ್ರಸ್ತರ ಬಾಲಕಿಯರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಎರಡು ಪೋಕ್ಸೋ ಕೇಸ್ ಪೈಕಿ ಮೊದಲನೇ ಪ್ರಕರಣ ಸಂಬಂಧ, ಮುರುಘಾ ಶ್ರೀ ಆಪ್ತ ಸಹಾಯಕ ಮಹಾಲಿಂಗಪ್ಪ, ಅಡುಗೆ ಭಟ್ಟ ಕರಿಬಸಪ್ಪ ಮತ್ತು, ಇನ್ನೊಬ್ಬ ಸಹಾಯಕ ಮಲ್ಲಿಕಾರ್ಜುನ ಹಾಗೂ ಆಫೀಸ್ ಬಾಯ್ ಪ್ರಜ್ವಲ್. ಈ ನಾಲ್ವರ ಹೇಳಿಕೆಗಳನ್ನ ಸಾಕ್ಷಿಯಾಗಿ ಪೊಲೀಸರು ಪಡೆದಿದ್ದಾರೆ. ಇವರು ಪೊಲೀಸರ ಮುಂದೆ ಕೊಟ್ಟಿರುವ ಹೇಳಿಕೆಗಳೇ ಬೆಚ್ಚಿ ಬೀಳಿಸುತ್ತಿವೆ.
ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವಂತೆ ಈ ಸ್ವಾಮಿಜಿ ಬಾಲಕಿಯರನ್ನು ಕರೆಸಿಕೊಳ್ಳಲು ಪ್ರತ್ಯೇಕ ಬಾಗಿಲನ್ನು ಬಳಸುತ್ತಿದ್ದ. ತನ್ನ ಕಾಮದ ಚಪಲ ತೀರಿಸಿಕೊಳ್ಳಲು ದಿನಕೊಬ್ಬರಂತೆ, ವಾರಕ್ಕೊಬ್ಬರಂತೆ ಬಾಲಕಿಯರ ಹೆಸರುಗಳನ್ನ ಪಟ್ಟಿ ಮಾಡಿಟ್ಟುಕೊಳ್ಳುತ್ತಿದ್ದು ಅದನ್ನು ವಾರ್ಡನ್ ರಶ್ಮಿಗೆ ಕೊಟ್ಟು ತನಗೆ ಬೇಕೆನಿಸಿದಾಗ ಬಾಲಕಿಯರನ್ನು ಖಾಸಗಿ ರೂಮಿಗೆ ಕರೆಸಿಕೊಳ್ಳುತ್ತಿದ್ದು ಹೀಗೆ ೧೦ಕ್ಕೂ ಹೆಚ್ಚು ಬಾಲಕಿಯರಿಗೆ ನಾಲ್ಕೈದು ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.
ಇಷ್ಟೇ ಅಲ್ಲದೆ, ಮದ್ಯಪಾನ, ಕಾಮಪುರಾಣ, ಹೆದರಿಸಿ ಬೆದರಿಸುವ ದುಷ್ಟತನ ಈ ಸ್ವಾಮಿಗೆ ಇತ್ತು ಎನ್ನುವ ಸಂಗತಿಯೂ ಬಯಲಾಗಿತ್ತು. ಶ್ರೀಗಳ ಕೊಠಡಿಗೆ ವಾರ್ಡನ್ ರಶ್ಮಿ ಬಾಲಕಿಯರನ್ನು ಬಲವಂತವಾಗಿ ತಳ್ಳುತ್ತಿದ್ದಳು. ಒಂದು ವೇಳೆ ಬಾಲಕಿಯರು ಕಾಮಕೂಪಕ್ಕೆ ಬೀಳಲು ನಿರಾಕರಿಸಿದರೆ ಬೆದರಿಕೆ ಹಾಕುವುದು ಹೀಗೆ ಕಿರುಕುಳ ನೀಡುತ್ತಿದ್ದಳು. ಇನ್ನು ಸ್ವಾಮೀಜಿ ಭಾನುವಾರ ಜನರಲ್ ರೂಮಿಗೆ ಬಂದ ಬಾಲಕಿಯರ ಪೈಕಿ ಇಬ್ಬರನ್ನು ಕಸ ಗುಡಿಸಲು ಕರೆಸಿಕೊಂಡು ಅವರ ಮೇಲೂ ದೌರ್ಜನ್ಯ ಎಸಗಿದ್ನಂತೆ. ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫ್ರೂಟ್ಸ್ ಕೊಡ್ತಿದ್ದ ಸ್ವಾಮೀಜಿ, ಹಣ್ಣು, ಚಾಕೊಲೇಟ್‌ನಲ್ಲಿ ಮತ್ತು ಬರಿಸೋ ವಸ್ತು ಸೇರಿಸಿ ರೇಪ್ ಮಾಡಿದ್ನಂತೆ. ಅಷ್ಟೇ ಅಲ್ಲ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯರನ್ನೂ ತನ್ನ ಕಾಮದಾಟಕ್ಕೆ ಬಳಸಿಕೊಂಡಿದ್ನಂತೆ. ಜೊತೆ ಸ್ನಾನ ಮಾಡುತ್ತಿದ್ದಾಗ ಬೆನ್ನು ಉಜ್ಜಲು ಕರೆಸಿಕೊಳ್ತಿದ್ದ ಸ್ವಾಮೀಜಿ, ಬಾಲಕಿಯರೇನಾದ್ರೂ ಬೇಡವೆಂದು ಹೇಳಿದ್ರೆ ಚಾಕು ತೋರಿಸಿ ಬೆದರಿಸಿದ್ದು ಇದಕ್ಕೂ ಭಯಾನಕ ಅಂದರೆ ಒಬ್ಬ ಬಾಲಕಿಗೆ ಈ ಸ್ವಾಮೀ ಅಬಾರ್ಷನ್ ಕೂಡಾ ಮಾಡಿಸಿದ್ದ ಎಂದು ಆರೋಪಿಸಲಾಗಿದೆ.