ಮುರುಘಾ ಶ್ರೀ ಸಂತಾಪ

ಚಿತ್ರದುರ್ಗ, ಮೇ – 27: ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನಕ್ಕೆ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸಂತಾಪ ವ್ಯಕ್ತಪಡಿಸಿದ್ದಾರೆ.ಹಿರಿಯ ಗಾಂಧಿವಾದಿಯಾಗಿದ್ದ ಶ್ರೀಯುತರು ಭೂ ಚಳವಳಿ, ನೀರಿನ ಹಕ್ಕಿಗಾಗಿ ಹಲವಾರು ಹೋರಾಟಗಳಲ್ಲಿ ಭಾಗವಹಿಸಿ ನಾಡು ನುಡಿಯ ಸೇವೆಯನ್ನು ಮಾಡಿ ಇಂದು ನಮ್ಮನ್ನೆಲ್ಲ ಅಗಲಿದ್ದು ನಾಡು ಅವರನ್ನು ಕಳೆದುಕೊಂಡು ಬಡವಾಗಿದೆ ಎಂದಿರುವ ಶ್ರೀಗಳು, ಅವರ ಆದರ್ಶ ಜೀವನ ಮತ್ತು ಜನಪರ ಕಾಳಜಿಯನ್ನು ಗುರುತಿಸಿ 2017ರಲ್ಲಿ ಶ್ರೀಮಠದಿಂದ ಮುರುಘಾ ಶ್ರೀ ಪ್ರಶಸ್ತಿ ಪ್ರದಾನ ಮಾಡಿರುವುದನ್ನು ಸ್ಮರಿಸಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬಕ್ಕಾಗಿರುವ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಬಸವಾದಿ ಪ್ರಮಥರು ನೀಡಲಿ ಎಂದಿದ್ದಾರೆ.