ಮುರುಘಾ ಶ್ರೀಗಳ ಬಂಧನಕ್ಕೆ ಡಿಎಸ್ ಎಸ್ ಒತ್ತಾಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.01: ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ರಾಜೇಂದ್ರ ಶರಣರನ್ನು ಆಪ್ರಾಪ್ತ  ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಬೇಕು ಎಂದು ಡಿ.ಜಿ.ಸಾಗರ್ ಬಣದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡರು, ಕಾರ್ಯಕರ್ತರು ಡಿಸಿ ಕಚೇರಿ ಎದುರಲ್ಲಿ ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿಗಳಿಗೆ  ಬರದ‌ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಲೈಂಗಿಕ ದೌರ್ಜನ್ಯ ಕುರಿತು  ಐವರ ವಿರುದ್ಧ ಮೈಸೂರು ನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಠದ ಸ್ವಾಮೀಜಿ ಸೇರಿದಂತೆ ವಸತಿ ನಿಲಯದ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿ  ಬಸವಾದಿತ್ಯ, ಪರಮಶಿವಯ್ಯ, ವಕೀಲ ಗಂಗಾಧರಯ್ಯ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ,
ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ಮಕ್ಕಳನ್ನು ಸ್ವಾಮೀಜಿ ಲೈಂಗಿಕವಾಗಿ ದುರ್ಬಳಕೆ , ಮಾಡಿಕೊಳ್ಳುತ್ತಿದ್ದರು, ಉಳಿದ ಆರೋಪಿಗಳು ಈ ಕೃತ್ಯಕ್ಕೆ ಸ್ವಾಮೀಜಿಯವರಿಗೆ ಸಹಕಾರ ನೀಡಿದ್ದರು, ಕಿರುಕುಳ, ಪ್ರಶ್ನಿಸಿದರೆ, ಮಕ್ಕಳನ್ನು ಹಾಸ್ಟೆಲ್‌ನಿಂದ ಹೊರಗೆ ಹಾಕಲಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದರು ಮತ್ತು 10ನೇ ತರಗತಿ ಓದುತ್ತಿರುವ 15 ಮತ್ತು 10 ವರ್ಷದ ಇಬ್ಬರು, ವಿದ್ಯಾರ್ಥಿನಿಯರು ” ನೀಡಿದ ದೂರಿನ ಮೇರೆಗೆ: ಐವರ ವಿರುದ್ಧ ಪ್ರಕರಣ ದಾಖಲಾಗಿದ್ದರಿಂದ  ಮುರುಘ ರಾಜೇಂದ್ರ ಶರಣರನ್ನು ಕೂಡಲೇ ಬಂಧಿಸುವಲ್ಲಿ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ.
ರಾಜ್ಯ ಸರ್ಕಾರವು ಸ್ವಾಮೀಜಿಗಳಿಗೆ ರಕ್ಷಣೆ ನೀಡದೇ ಕೂಡಲೇ ಬಂಧಿಸಬೇಕು ಮತ್ತು ಸಂತ್ರಸ್ತರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ,  ಜಿಲ್ಲಾ ಸಂಘಟನಾ ಸಂಚಾಲಕ ಹೆಚ್‌.ಸಿದ್ದೇಶ, ಹೆಚ್.ಆಂಜಿನೇಯಲು, ಮಲ್ಲಯ್ಯ ಕೊಳಗಲ್ಲು, ಕೆ.ದೇವದಾಸ್, ಜಿಲ್ಲಾ ಖಜಾಂಚಿ ವಿ.ಕೆ.ಗಾದಿಲಿಂಗಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಟಿ.ಎಂ, ಎರಿಸ್ವಾಮಿ,ಸಂಘಟನಾ ಸಂಚಾಲಕರಾದ ಕಟ್ಟೇಸ್ವಾಮಿ, ದ.ವಿ.ಒ ಜಿಲ್ಲಾ ಖಜಾಂಚಿ ಶಿವಣ್ಣ ಅಸುಂಡಿ, ಜಿಲ್ಲಾ ಕಲಾಮಂಡಳಿ ಸಂಚಾಲಕ ಜಿ.ಪಂಪಾಪತಿ, ಸಂಘಟನಾ ಸಂಚಾಲಕ ರಾಜ, ಜಿಲ್ಲಾ ಸಂಘಟ ದಲಿತ ಪದಾಧಿಕಾರಿಗಳಾದ ರಮೇಶ ಬಿಸಲಹಳ್ಳಿ, ಮಲ್ಲಿಕಾರ್ಜುನ ಕುಡತಿನಿ, ರಾಜೇಶ, ಹುಲುಗಪ್ಪ ಬೆಳಗಲ್, ಗಗಾಧರ ವೇಣಿವೀರಾಪುರ, ಹೊನ್ನೂರಪ್ಪ (ಕಿ‌), ಬಳ್ಳಾರಿ ತಾಲೂಕು ಸಂಚಾಲಕರಾದ ಹೆಚ್‌.ಮಲ್ಲಪ್ಪ, ಸಂಚಾಲಕರಾದ ಶಂಕರ್ ಬಾಪೂಜಿ ನಗರ, ರಂಗಪ್ಪ, ಹನುಮಂತ ವೈ.ಬೂದಿಹಾಳು, ಹಲಕುಂದಿ, ಎಂಸ್ವಾ ಸಿರುಗುಪ್ಪ ತಾಲೂಕು ಸಂಚಾಲಕರಾದ ದೊಡ್ಡ ಬಸಪ್ಪ, ಸಂಡೂರು ತಾಲೂಕು ಸಂಚಾಲಕರಾದ ಕೆ.ದೇವದಾಸ, ಕೂಡ್ಲಿಗಿ ತಾಲೂಕು ಸಂಚಾಲಕರಾದ ದುರುಗೇಶ್, ಕಂಪ್ಲಿ ತಾಲೂಕು ಸಂಚಾಲಕರಾದ ರಾಮಯ್ಯ, ಜಗದೀಶ್, ತಾಲೂಕು ಪದಾಧಿಕಾರಿಗಳಾದ ಭೀಮಶಂಕರ್, ಬಳ್ಳಾರಿ ನಗರ ಅಧ್ಯಕ್ಷರಾದ ಭತ್ರಿ ಮಹೇಶ, ಮಲ್ಲಿಕಾರ್ಜುನ ಇಂದಿರಾನಗರ, ಶಶಿಕುಮಾ‌ ಟಿ.ಬೂದಿಹಾಳು, ಹನುಮಂತ ಕುಡುತಿನಿ, ಕೃಷ್ಣ ಸಂಗನಕಲ್ಲು, ಪುನೀತ್ ಸಂಗನಕಲ್ಲು, ತಿಪ್ಪೇಸ್ವಾಮಿ (ಅಯ್ಯ) ಹಾಗೂ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.

Attachments area