ಮುರುಘಾ ಶರಣರಿಗೆ ವಿಐಪಿ ಮಾನ್ಯತೆ ನೀಡದಿರಲು ಆಗ್ರಹ

ದಾವಣಗೆರೆ.ಸೆ.೨: ಫೋಕ್ಸೋ ಪ್ರಕರಣದಡಿ ಬಂಧನಕ್ಕೆ ಒಳಗಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಸಾಮಾನ್ಯರಂತೆ ನಡೆಸಿಕೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ) ಜಿಲ್ಲಾ ಸಂಚಾಲಕ ರವಿಕುಮಾರ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರುಘಾ ಶರಣರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾದ ನಂತರ ಆರು ದಿನಗಳ ನಂತರವಾದರೂ ಬಂಧನಕ್ಕೆ ಒಳಪಡಿಸಿರುವುದು ಒಳ್ಳೆಯ ನಡೆ. ಸ್ವಾಮೀಜಿ ಪ್ರಭಾವ ಸ್ಥಾನದಲ್ಲಿ ಇರುವುದರಿಂದ ಅವರು ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಒತ್ತಾಯಿಸಿದರು.ಸ್ವಾಮೀಜಿಯವರು ಸಂಧಾನ ಮತ್ತು ಸಮರಕ್ಕೂ ಸಿದ್ದ ಎಂದಿದ್ದಾರೆ. ಸಂಧಾನ ಎಂದರೆ ಯಾರೊಡನೆ ಮತ ಯಾವ ಕಾರಣಕ್ಕೆ ಆಗಬೇಕಿದೆ.  ಸಮರ ಎಂದರೆ ಯಾವ ಕಾರಣಕ್ಕೆ ಯಾರ ವಿರುದ್ದ ಎನ್ನುವುದು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.ಮುರುಘಾ ಶರಣರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದರೂ ಕೆಲ ಸ್ವಾಮೀಜಿಯವರು ಶರಣರ ಪರ ಮಾತನಾಡಿದ್ದಲ್ಲದೆ ಸ್ವಾಮೀಜಿ ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಮೂರ್ತಿ ಗಳಂತೆ ಹೇಳಿಕೆ ನೀಡಿರುವುದು ಸರಿ ಅಲ್ಲಬಹಿರಂಗವಾಗಿ ಸ್ವಾಮೀಜಿ ಪರ ಹೇಳಿಕೆ ನೀಡಿದವರ ವಿರುದ್ಧ ಸಾಕ್ಷಿನಾಶದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.ಸಂತ್ರಸ್ತರಿಗೆ ಒಂದು ಕೋಟಿ ಪರಿಹಾರ, ಸರ್ಕಾರಿ ನೌಕರಿಯ ಖಚಿತತೆಯೊಂದಿಗೆ ಸರ್ಕಾರ ಉಚಿತವಾಗಿ ಶಿಕ್ಷಣ ಕೊಡಬೇಕು ಎಂದು ಆಗ್ರಹಿಸಿದರು.ಸಂಘಟನೆಯ ಎಚ್. ಮಲ್ಲಿಕಾರ್ಜುನ ವಂದಾಲಿ, ಎಂ. ರವಿ, ರಾಘವೇಂದ್ರ ಡಿ. ಕಡೇಮನಿ, ಕೆಂಚಮ್ಮನಹಳ್ಳಿ ರುದ್ರೇಶ್, ಹಾಲುವರ್ತಿ ನಾಗರಾಜ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.