ಮುರುಘಾಮಠದಲ್ಲಿ ಸಿಪಿಆರ್ ತರಬೇತಿ ಕಾರ್ಯಾಗಾರ

ಚಿತ್ರದುರ್ಗ ಸೆ. 25 – ಶರಣಸಂಸ್ಕೃತಿ ಉತ್ಸವ-2021ರ ಅಂಗವಾಗಿ ಬಸವಕೇಂದ್ರ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಸಿಪಿಆರ್ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, ಇದೊಂದು ವಿಶ್ವದಾಖಲೆಯ ಕಾರ್ಯಕ್ರಮ. ಶರಣಸಂಸ್ಕೃತಿ ಉತ್ಸವದ ಬಹುಮುಖ್ಯ ಘಟ್ಟ ಇದಾಗಿದ್ದು, ವೈದ್ಯಕೀಯ ಚಿಕಿತ್ಸೆಗೆ ಸಂಬAಧಿಸಿದ ಸಿಪಿಆರ್ ತರಬೇತಿ ಬಹಳ ಪ್ರಮುಖವಾದುದಾಗಿದೆ. ಮಾನವನ ಶರೀರದಲ್ಲಿ ಪ್ರಮುಖವಾಗಿ ಮೆದುಳು, ಹೃದಯ ಮತ್ತು ಕಿಡ್ನಿ ಈ ಮೂರು ಅಂಗಗಳು ಮುಖ್ಯವಾದುವು. ಯಾರು ಮೆದುಳಿನ ಮಹತ್ವವನ್ನು ಅರಿತುಕೊಳ್ಳುತ್ತಾನೋ ಅವನು ಒಂದುದಿನ ಸೂಪರ್‌ಮ್ಯಾನ್ ಆಗುತ್ತಾನೆ. ನಾವೆಲ್ಲರು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹೃದಯ ಸಂಬAಧಿ ಕಾಯಿಲೆಗಳಿಂದ ದೂರವಿರಬೇಕೆಂದರು. ನಮ್ಮ ಅಂಗಾAಗಗಳನ್ನು ದಾನ ಮಾಡುವುದರ ಮೂಲಕ ಇತರರ ಜೀವರಕ್ಷಣೆಗೆ ಸಹಾಯ ಮಾಡಬೇಕು. ತಾವು 20ವರ್ಷಗಳ ಹಿಂದೆಯೇ ನೇತ್ರದಾನ ಮಾಡಲು ವಾಗ್ದಾನ ಮಾಡಿರುವುದಾಗಿ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಕಾರ್ಯಾಧ್ಯಕ್ಷರಾದ ಕೆ.ಎಸ್. ನವೀನ್ ಹಾಗೂ ಐಸಿಎಟಿಟಿ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ಶಾಲಿನಿ, ಡಾ. ನಿಶ್ಚಲ, ಕರ್ನಾಟಕ ಸೆಮಿ ಹಾರ್ಟ್ ಅಂಡ್ ಸ್ಟೊçÃಕ್ ಫೌಂಡೇಶನ್ನಿನ ಡಾ ಗೋಮಾ, ಡಾ. ನೀಲಾ, ಡಾ. ನಜೀಮಾ, ಡಾ. ಶ್ರೀನಾಥನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್, ಬಸವೇಶ್ವರ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ. ಪಾಲಾಕ್ಷಪ್ಪ, ಡಾ. ವಿನಯ್, ಡಾ. ಸುಖಾಂತ್, ಕ್ರಿಪ್ಟ್ ರಿಲೀಪ್ ಸಂಸ್ಥೆಯ ಸಿಓ ಹಾಗು ಕಾರ್ಯಕ್ರಮ ಪ್ರಾಯೋಜಕರಾದ ಪುನೀತ್ ಅಗರ್‌ವಾಲ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ನ ವೀಕ್ಷಕರಾಗಿ ಆಗಮಿಸಿದ ಡಾ. ಮುರುಗಮ್, ಸಿದ್ಧಾರ್ಥ ಗುಂಡಾರ್ಪಿ, ಡಾ. ಗೌರಮ್ಮ, ಬಸವೇಶ್ವರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, 9 ವಿವಿಧ ವಿದ್ಯಾಸಂಸ್ಥೆಗಳ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಅಮೃತ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್ ನಿರೂಪಿಸಿ ವಂದಿಸಿದರು.