ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ

ಚಿತ್ರದುರ್ಗ ಡಿ. 5 : ಸಾಮೂಹಿಕ ಕಲ್ಯಾಣ ಮಹೋತ್ಸವ ನವ ವಧು-ವರರಿಗೆ ಇದೊಂದು ಅಪೂರ್ವ ಸಂದರ್ಭ. ನಿಮ್ಮ ಕೊರಳಲ್ಲಿರುವ ಹೂಮಾಲೆ ಎಲ್ಲಿಯೋ ಬೆಳೆದರೂ ಅದು ಶುಭ ಸಂದರ್ಭಕ್ಕೆ ತನ್ನ ಬದುಕನ್ನು ಸಮರ್ಪಿಸಿಕೊಳ್ಳುತ್ತಿದೆ. ಯಾರ ಕುಟುಂಬದಲ್ಲಿ ಹಣದ ದುರಾಸೆ ಮೂಡುತ್ತದೋ ಅವರ ಸಂಸಾರ ಸುಖವಾಗಿರುವುದಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಮೂವತ್ತೊಂದನೆ ವರ್ಷದ ಹನ್ನೆರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಹೆಣ್ಣಿನ ಕಡೆಯವರ ಹಣವನ್ನು ಪೀಡಿಸಿ ತಂದು ಬದುಕುವವರ ಬದುಕು ಅಷ್ಟೊಂದು ಸುಖವಾಗಿರುವುದಿಲ್ಲ. ಗಂಡಸರು ಯಾರೂ ತಮ್ಮನ್ನು ಹಣಕ್ಕೆ ಮಾರಾಟ ಮಾಡಿಕೊಳ್ಳಬಾರದು. ಯಾರೂ ಸಹ ಶೋಷಣೆ ಮಾಡಬಾರದು. ಬುದ್ಧ, ಬಸವಣ್ಣ, ಅಂಬೇಡ್ಕರ್, ಪೈಗಂಬರ್, ಏಸು ಅವರುಗಳು ಶೋಷಣೆ ವಿರುದ್ಧ ಹೋರಾಡಿದರು. ಸತ್ಪುರುಷರ ಮಹಾತ್ಮರ ಕೊರಳನ್ನು ಸೇರುವುದು ಮತ್ತು ವಧುವರರ ಕೊರಳನ್ನು ಸೇರುವ ಹೂಮಾಲೆ ಅದೆಂತಹ ವಿಶಾಲಭಾವನೆವುಳ್ಳದ್ದು. ಯಾರು ಸಂಸ್ಕೃತಿಯ ಜೊತೆಗೆ ಸಾಗುತ್ತಾರೋ ಅವರು ಸುಂದರ ಬದುಕಿಗೆ ಸಾಕ್ಷಿಯಾಗುತ್ತಾರೆ. ಹೂವಿನ ಸಾರ್ಥಕತೆ ಎಂದರೆ ಕೊರಳನ್ನು ಅಲಂಕರಿಸುವುದು ಎಂದರು.ಕುAದಗೋಳ ಶ್ರೀ ಕಲ್ಯಾಣಪುರ ಮಠದ ಶ್ರೀ ಬಸವಣ್ಣೆಜ್ಜ ಅವರು ಮಾತನಾಡಿ, ಶ್ರೀಗಳು ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಶ್ರೀಗಳು ಸರಳ ವಿವಾಹಕ್ಕೆ ಮುಂದಾಗಿರುವುದು ಸಂತಸದ ವಿಷಯ. ನಮ್ಮಂತಹ ಅನೇಕ ಮಠಾಧೀಶರಿಗೆ ಮಾರ್ಗದರ್ಶಿಯಾಗಿದ್ದಾರೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಅವರ ಅವಿರತ ಪ್ರಯತ್ನ ಮುಂದುವರಿದಿದೆ. ನವದಂಪತಿಗಳಿಗೆ ಶ್ರೀಗಳ ಆಶೀರ್ವಾದ ಯಾವತ್ತೂ ಇರುತ್ತದೆ ಎಂದರು. ಅಖಿಲ ಭಾರತ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ತನ್ನದೇ ಆದ ಪರಂಪರೆಯನ್ನು ಭಾರತ ದೇಶ ಹೊಂದಿದೆ. ಹಿಂದೂ ಧರ್ಮ ಸಂಸ್ಕಾರಕ್ಕೆ ಒಳಗಾಗಿದ್ದರೂ ವಿದೇಶಿ ವ್ಯಾಮೋಹಕ್ಕೆ ಒಳಗಾಗುತ್ತಿz್ದೆÃವೆ. ಧರ್ಮ ಉಳಿಸಲು ಅನೇಕ ಮಠಗಳು ಶ್ರಮಿಸುತ್ತಿವೆ. ಎಲ್ಲ ಧರ್ಮದ ಜಾತಿಯ ವಿವಾಹಗಳು ಮುರುಘಾಮಠದಲ್ಲಿ ನಡೆಯುತ್ತಿರುವುದು ವಿಶೇಷ. ಇದು ರಾಷ್ಟçಕ್ಕೆ ಪ್ರೇರಣೆ. ಯಾರೂ ಸಹ ಆಡಂಬರದ ಜೀವನಕ್ಕೆ ಒಳಗಾಗಬಾರದು. ಸರಳ ಜೀವನ ನಡೆಸಬೇಕು. ಮನುಷ್ಯ ಧಾರ್ಮಿಕವಾಗಿ ಬೆಳೆಯಬೇಕೆಂದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಹರೀಶ್‌ದೇವರು ಸ್ವಾಗತಿಸಿದರು. ಪ್ರಕಾಶ್ ದೇವರು ನಿರೂಪಿಸಿದರು.