ಮುರುಘಾಮಠದಲ್ಲಿ ಆರೋಗ್ಯಮೇಳ

ಚಿತ್ರದುರ್ಗ ಸೆ. 23 – ನಗರದ ಶ್ರೀ ಮುರುಘರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಸೆ. 25 ರವರೆಗೆ ಆರೋಗ್ಯಮೇಳ ನಡೆಯಲಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.ಶ್ರೀಮಠದಲ್ಲಿಂದು ಶರಣಸಂಸ್ಕೃತಿ ಉತ್ಸವ-2021ರ ಕರಪತ್ರ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯನ್ನು ಉz್ದೆÃಶಿಸಿ ಮಾತನಾಡಿದ ಶ್ರೀಗಳು, ಪೀಠಾರೋಹಣ ತೃತೀಯ ದಶಮಾನೋತ್ಸವ ಮತ್ತು ಶರಣಸಂಸ್ಕೃತಿ ಉತ್ಸವದ ಅಂಗವಾಗಿ ರಾಷ್ಟçಮಟ್ಟದ ಪುರುಷ ಮತ್ತು ಮಹಿಳೆಯರ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿ, ಕೃಷಿ ಮತ್ತು ಕೈಗಾರಿಕಾ ಮೇಳ, ರಾಜ್ಯಮಟ್ಟದ ಭಜನೆ, ವೀರಗಾಸೆ, ಕೋಲಾಟ ಜಾನಪದ ಕಲೆಗಳ ಸ್ಪರ್ಧೆ, ಹಾಲು ಕರೆಯುವ ಸ್ಪರ್ಧೆ, ಜೋಡೆತ್ತು ಮತ್ತು ಶ್ವಾನ ಪ್ರದರ್ಶನ, ವಿಶ್ವಕಲ್ಯಾಣಕ್ಕಾಗಿ ಸಾಮೂಹಿಕ ಲಿಂಗಪೂಜೆ. ಮಠಾಧೀಶರಿಂದ ಸರ್ವಧರ್ಮ ಮಠಾಧೀಶರ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು. ಶ್ರೀ ಚನ್ನಭದ್ರ ಸ್ವಾಮಿಗಳು ಮಾತನಾಡಿ, ಶರಣಸಂಸ್ಕೃತಿ ಉತ್ಸವದಲ್ಲಿ ಎಲ್ಲ ಧರ್ಮೀಯ ಸ್ವಾಮಿಗಳು ಸೇರಿ ಡಾ. ಶಿವಮೂರ್ತಿ ಮುರುಘಾ ಶರಣರ ತೃತೀಯ ದಶಮಾನೋತ್ಸವದ ಪ್ರಯುಕ್ತ ಸರ್ವಧರ್ಮ ಮಠಾಧೀಶರ ಸಮಾವೇಶ, ಸಾವಿರಾರು ಮಠಾಧೀಶರಿಂದ ಅ. 18 ರಂದು ವಿಶ್ವಕಲ್ಯಾಣಕ್ಕಾಗಿ ಸಾಮೂಹಿಕ ಲಿಂಗಪೂಜೆ ನೆರವೇರಲಿದೆ. ಸಾರ್ವಜನಿಕರು ಈ ಸಭೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.ತಿಪಟೂರು ಶ್ರೀ ರುದ್ರಮುನಿ ಸ್ವಾಮಿಗಳು ಮಾತನಾಡಿ, ಸಾಂಸ್ಕೃತಿಕ ರಾಯಭಾರಿಯಾಗಿ ಡಾ. ಶಿವಮೂರ್ತಿ ಮುರುಘಾ ಶರಣರು ಶ್ರಮಿಸುತ್ತಿದ್ದಾರೆ. ಶ್ರೀಗಳವರ ಕ್ರೀಯಾಶೀಲ ಜನಪರ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದಾರೆ. ಈ ಬಾರಿಯ ಉತ್ಸವದಲ್ಲಿ ಸಾವಿರಾರು ಸ್ವಾಮೀಜಿಗಳಿಂದ ಲಿಂಗಪೂಜೆಯ ವಿಶೇಷ ಕಾರ್ಯಕ್ರಮ ಜರುಗಲಿದೆ ಎಂದರು.ಈ ಸಂದರ್ಭದಲ್ಲಿ ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು, ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು, ಶ್ರೀ ಚಕ್ರಭಾವಿಸ್ವಾಮಿಗಳು, ಸೂಗೂರು ಡಾ. ಚನ್ನರುದ್ರಮುನಿ ಶಿವಾಚಾರ್ಯರು, ಕಂಪ್ಲಿ ಸ್ವಾಮಿಗಳು, ಡಾ. ಬಸವಕುಮಾರ ಸ್ವಾಮಿಗಳು, ಬಳ್ಳಾರಿಯ ಶ್ರೀ ಕಲ್ಯಾಣ ಸ್ವಾಮಿಗಳು, ಅಥಣಿಯ ಶ್ರೀ ಶಿವಬಸವ ಸ್ವಾಮಿಗಳು, ದಾವಣಗೆರೆ ಶ್ರೀ ಬಸವಪ್ರಭು ಸ್ವಾಮಿಗಳು, ಹಾವೇರಿಯ ಶ್ರೀ ಬಸವಶಾಂತಲಿAಗ ಸ್ವಾಮಿಗಳು, ಶಿರಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಬ್ಯಾಡಗಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳು, ಕುಕ್ಕನೂರು ಶ್ರೀ ಚನ್ನಮಲ್ಲಪ್ಪ ಸ್ವಾಮಿಗಳು, ಆದೋನಿಯ ಮರಿರಾಚೋಟಿ ಸ್ವಾಮಿಗಳು, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮಿಗಳು, ಎರೆಹೊಸಳ್ಳಿಯ ಶ್ರೀ ವೇಮನಾನಂದ ಸ್ವಾಮಿಗಳು, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶಿರಗುಪ್ಪದ ಶ್ರೀ ಬಸವಭೂಷಣ ಸ್ವಾಮಿಗಳು, ತಿಪ್ಪಾಯಿಕೊಪ್ಪದ ಮಹಾಂತ ಸ್ವಾಮಿಗಳು, ಕಿತ್ತೂರು ಶ್ರೀ ಸಂಕುಮಾರ ಸ್ವಾಮಿಗಳು, ಕೊಪ್ಪಳದ ಸಿದ್ಧಲಿಂಗ ದೇವರು, ಚಿತ್ರದುರ್ಗ ಜಿಲ್ಲಾಧಿಕಾರಿ ಶ್ರೀಮತಿ ಕವಿತ ಎಸ್. ಮನ್ನಿಕೇರಿ, ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎ.ಜೆ.ಪರಮಶಿವಯ್ಯ ಮೊದಲಾದವರಿದ್ದರು.