ಮುರುಘಾಮಠಕ್ಕೆ ರಾಹುಲ್ ಭೇಟಿ

ಚಿತ್ರದುರ್ಗ, ಆ. ೩- ದಾವಣಗೆರೆಯಲ್ಲಿ ಇಂದು ನಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೫ನೇ ಜನ್ಮದಿನದ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಅವರು ಇಂದು ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಶರಣರ ಆಶೀರ್ವಾದ ಪಡೆದುಕೊಂಡರು.
ಇಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ ರಾಹುಲ್‌ಗಾಂಧಿ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದು ಅವರ ಜತೆ ಸ್ವಲ್ಪಹೊತ್ತು ಚರ್ಚೆ ನಡೆಸಿದರು.

ದಾವಣಗೆರೆಯ ಮುರುಘಾಮಠಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭೇಟಿನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಠದ ಸ್ವಾಮೀಜಿ ಶಿವಮೂರ್ತಿ ಶಿವಾಚಾರ್ಯ ಇದ್ದಾರೆ.

ಇದಾದ ನಂತರ ರಾಹುಲ್‌ಗಾಂಧಿಯವರು ಮಠದ ಆವರಣದಲ್ಲೇ ಸುಮಾರು ೩೦ ಮಠಾಧೀಶರ ಜತೆ ಸಂವಾದ ನಡೆಸಿದರು.
ನಂತರ ಅವರು ಚಿತ್ರದುರ್ಗದಿಂದ ದಾವಣಗೆರೆಗೆ ತೆರಳಿದರು.