ಮುರುಘಮಠದಲ್ಲಿ ನಡೆದ ಸಿಪಿಆರ್ ತರಬೇತಿ

ಚಿತ್ರದುರ್ಗ. ಸೆ.೨೬; ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ನಡೆದ ಸಿಪಿಆರ್ ತರಬೇತಿಯು ಮುರುಘಾಮಠದಲ್ಲಿ ಡಾ. ಶಿವಮೂರ್ತಿಮುರುಘಾ ಶರಣರ ಸಾನಿದ್ಯದಲ್ಲಿ ಬಿಜೆಪಿ ಮುಖಂಡರಾದ ಕೆ.ಎಸ್.ನವೀನ್ ಅಧ್ಯಕ್ಷತೆಯಲ್ಲಿ ನಡೆಯಿತು ಡಾ.ಶಾಲಿನಿ ನಲ್ವಡ್ ಹಾಗೂ ಐಕ್ಯಾನ್ ಸಂಸ್ಥೆಯವರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ರಂಗನಾಥ್‌ರವರು ಭಾಗವಹಿಸಿದ್ದರು.ಈ ತರಬೇತಿಗೆ ಜಿಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಪಿ.ಎನ್.ರಂಗಸ್ವಾಮಿ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.