ಮುರುಗೇಶ ನಿರಾಣಿ ಫೌಂಡೇಷನ್‍ದಿಂದ ಕಲಬುರಗಿ ಜಿಲ್ಲಾಡಳಿತಕ್ಕೆ 250 ಸ್ಯಾನಿಟೈಸರ್ ಕ್ಯಾನ್ ಹಸ್ತಾಂತರ

ಕಲಬುರಗಿ.ಮೇ.29:ಕೊವೀಡ್-18 ಹಿನ್ನೆಲೆಯಲ್ಲಿ ಸೇವಾ ಭಾರತಿ ಟ್ರಸ್ಟ್ ಮುಧೋಳ ಹಾಗೂ ಎಂ.ಆರ್.ಎನ್. (ನಿರಾಣಿ) ಫೌಂಡೇಷನ್‍ದಿಂದ ಇಂದು ಕಲಬುರಗಿ ಜಿಲ್ಲಾಡಳಿತಕ್ಕೆ 250 ಸ್ಯಾನಿಟೈಸರ್ ಕ್ಯಾನ್‍ಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಬಸವರಾಜ ಮತ್ತಿಮೂಡ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ವಿಧಾನ ಪರಿಷತ್ತಿನ ಶಾಸಕ ಶಶೀಲ ಜಿ. ನಮೋಶಿ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀμï ಶಶಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಉಪಯೋಗಿಸುವ ವಿಧಾನ ಇಂತಿದೆ. ಸೋಡಿಯಂ ಹೈಪೆÇೀ ಕ್ಲೋರೈಡ್ (ಐದು ಪರ್ಸೆಂಟ್ ಸೊಲ್ಯೂಷನ್) ಸೋಂಕು ನಿವಾರಕ ದ್ರಾವಣ ಇದಾಗಿದೆ. 35 ಲೀಟರ್ ನೀರಿಗೆ ಒಂದು ಲೀಟರ್ ಸೋಡಿಯಂ ಹೈಪೆÇೀ ಕ್ಲೋರೈಡ್ ಸೊಲ್ಯೂಷನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಧರಿಸಬೇಕು. ಕೆಮಿಕಲ್ ಸ್ಪ್ರೇ ಪಂಪ್‍ನಿಂದ ಸಾರ್ವಜನಿಕ ರಸ್ತೆ, ಸ್ಥಳಗಳಲ್ಲಿ ಪಂಚಾಯಿತಿ ಕಟ್ಟೆ ಹಾಗೂ ಚರಂಡಿಗಳಲ್ಲಿ ಸಿಂಪಡಿಸಲು ಇದು ಬಳಸಬಹುದಾಗಿದೆ.