ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ; ವಚನಾನಂದ ಶ್ರೀ ಸಂತಸ

ದಾವಣಗೆರೆ.ಜ.೧೩; ಬಿಎಸ್ ವೈ ಸಂಪುಟದಲ್ಲಿ ಮುರುಗೇಶ್ ನಿರಾಣಿ ಸಚಿವರಾಗುತ್ತಿರುವ ಹಿನ್ನಲೆಯಲ್ಲಿ ದಾವಣಗೆರೆಯ ಹರಿಹರದ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ಈ ವೇಳೆ  ನಿರಾಣಿಯವರನ್ನು ಕ್ಯಾಬಿನೆಟ್‌ಗೆ ಸೇರಿಸಿಕೊಂಡಿದ್ದಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಮುರುಗೇಶ್ ನಿರಾಣಿಯವರು ಸಂಪುಟದಲ್ಲಿ ಉತ್ತಮ ಕೆಲಸ ಮಾಡುವಂತೆ ಶ್ರೀಗಳು ಶುಭ ಹಾರೈಸಿದ್ದಾರೆ. ಕಳೆದ ವರ್ಷ ಜನವರಿ ೧೪ ರಂದು ಹರಿಹರದಲ್ಲಿ ಹರಜಾತ್ರೆಯಲ್ಲಿ ನಡೆದಿತ್ತುಈ ವೇಳೆ ವೇದಿಕೆಯಲ್ಲೆ ಮುರುಗೇಶ್ ನಿರಾಣಿಯವರನ್ನ ಕ್ಯಾಬಿನೇಟ್ ಗೆ ಸೇರಿಸಿಕೊಳ್ಳುವಂತೆ  ಶ್ರೀಗಳು ಹೇಳಿದ್ದರು.
ನಾಳೆ  ಹರ ಜಾತ್ರೆಗೆ ನಿರಾಣಿಯವರು ಸಚಿವರಾಗಿ ಆಗಮಿಸುತ್ತಿರುವುದಕ್ಕೆ ವಚನಾನಂದ ಶ್ರೀಗಳು ಹರ್ಷ ವ್ಯಕ್ತಪಡಿಸಿದ್ದಾರೆ.