ಮುರಾಳ ಕುಡಿಯುವ ನೀರಿನ ಅರವಟಿಗೆ ಉದ್ಘಾಟನೆ

ತಾಳಿಕೋಟೆ:ಮಾ.15: ಪಟ್ಟಣದಲ್ಲಿಯ ಸಹಕಾರಿ ಬ್ಯಾಂಕ್ ಪಕ್ಕದಲ್ಲಿ ಸಾಯಿಲ್ ಮುರಾಳ ಅವರ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ಸಲವು ದಿ. 13 ಸೋಮವಾರರಂದು ಕುಡಿಯುವ ನೀರಿನ ಅರವಟಿಗೆ ಪ್ರಾರಂಬಕ್ಕೆ ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭಾರತ ಮಂಟಪ ಮಾಲಿಕ ದಿ.ಶಫೀಕ್ ಮುರಾಳ ಅವರು ಕಳೆದ 4, 5 ವರ್ಷಗಳಿಂದ ಕುಡಿಯುವ ನೀರಿನ ಸೇವಾ ಕಾರ್ಯ ಮಾಡುತ್ತಾ ಬಂದಿದ್ದರು ಆದರೆ ಅವರ ಆಕಸ್ಮೀಕ ನಿಧನರಾಗಿದ್ದು ಆದರೂ ಅವರ ಕುಟುಂಭದವರು ದಿ.ಶಫೀಕ್ ಮುರಾಳ ಅವರ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯವನ್ನು ಮಾಡಿದ್ದಾರೆ ಪ್ರತಿ ವರ್ಷ ಮಾರ್ಚ ತಿಂಗಳಿನಿಂದ ಬಿಸಿಲಿನ ಧಃಗೆ ಇಳುವರೆಯಾಗುವವರೆಗೂ ಜನರಿಗೆ ನೀರಿನ ದಾಹ ಇಂಗಿಸುವಂತಹ ಕಾರ್ಯ ಮಾಡುತ್ತಾ ಬಂದಿದ್ದಾರೆ ಮುರಾಳ ಅವರ ನಿಸ್ಕಾಮ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಅವರ ಸೇವೆ ಹೀಗೆ ಮುಂದುವರೆಯಲಿ ಜನರ ಪ್ರೀತಿ ವಿಸ್ವಾಸಕ್ಕೆ ಇನ್ನಷ್ಟು ಪಾತ್ರವಾಗಲಿ ಎಂದು ಹಾರೈಸಿದರು.

ಇನ್ನೋರ್ವ ಸೈಯದ ಶಕೀಲಅಹ್ಮದ ಖಾಜಿ ಅವರು ಮಾತನಾಡಿ ಮುರಾಳ ಮನೆತನದವರಲ್ಲಿ ಯಾವುದೇ ಬೇದ ಭಾವವಿಲ್ಲಾ ಎಲ್ಲರೂ ನಮ್ಮವರೇ ಎಂಬ ಆತ್ಮೀಕ ಭಾವನೆಯೊಂದಿಗೆ ಸಾಗಿದ್ದಾರೆ ಅವರ ಇಡೀ ಕುಟುಂಭವೇ ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸುವದರೊಂದಿಗೆ ಜನರ ಪ್ರೀತಿ ವಿಸ್ವಾಸಕ್ಕೆ ಪಾತ್ರವಾಗಿದೆ ಮಾನವರಾದ ನಾವು ಬಸವಣ್ಣನವರು ಹಾಗೂ ಮಹ್ಮದ ಪೈಗಂಬರ ಅವರು ಹೇಳಿದಂತೆ ದಾಸೋಹದ ಕಲ್ಪನೆ ನಮ್ಮೇಲ್ಲರಲ್ಲಿ ಬರಲಿ ಮನುಷ್ಯರಿಗೆ ಮುರಾಳ ಕುಟುಂಭದವರು ಸ್ವಂತ ಹಣದಲ್ಲಿ ಶುದ್ದ ಕುಡಿಯುವ ನೀರಿನ ಅರವಟಿಗೆ ನಿರ್ಮಿಸಿ ಜನರಿಗೆ ಕುಡಿಯುವ ನೀರಿನ ದಾಹ ಇಂಗಿಸುವ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ ಎಂದರು.

ಇನ್ನೋರ್ವ ರಾಘವೇಂದ್ರ ವಿಜಾಪೂರ ಮಾತನಾಡಿ ದಿ. ಶಫೀಕ್ ಮುರಾಳ ಅವರು ಎಲ್ಲ ಕೋಮಿನವರೊಂದಿಗೆ ಬೆರೆತು ಸಹೋದರ ಭಾವನೆಯೊಂದಿಗೆ ಸಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರ ಕುರಿತು ಗುಣಗಾನ ಮಾಡಿದರು.

ಮೋಹ್ಮದ ಸಾಹಿಲ್ ಅವರು ಮಾತನಾಡಿ ಅಜ್ಜ ದಿ.ಇಬ್ರಾಹಿಂ ಮುರಾಳ, ಅಜ್ಜಿ ದಿ.ರಬಿಯಾ ಮುರಾಳ ಅವರ ಸ್ಮರಣಾರ್ಥವಾಗಿ ತಂದೆ ದಿ.ಶಫೀಕ್ ಮುರಾಳ ಅವರು ಕುಡಿಯುವ ನೀರಿನ ಅರವಟಿಗೆ ಪ್ರತಿವರ್ಷ ನಿರ್ಮಿಸಿ ಜನ ಸೇವೆಯಲ್ಲಿ ತೊಡಗಿದ್ದರು ಆದರೆ ತಂದೆ ಶಫೀಕ್ ಮುರಾಳ ಅಖಾಲಿಕ ನಿಧನ ಕುಟುಂಭಕ್ಕೆ ಅಘಾತತಂದಿದ್ದರು ಅವರ ಸೇವೆ ಮುಂದುವರೆಯಲಿ ಎಂಬ ಕಾರಣದಿಂದ ಕುಟುಂಭದವರೇಲ್ಲರೂ ತಿರ್ಮಾನಿಸಿ ಅವರ ಆಸೆಯದಂತೆ ಕುಡಿಯುವ ನೀರಿನ ಅರವಟಿಕೆ ನಿರ್ಮಿಸಲಾಗಿದೆ ಎಂದರು.

  ಈ ಸಮಯದಲ್ಲಿ ಮುರಾಳ ಕುಟುಂಭದವರಾದ ರಫೀಕ್, ಇಕ್ಬಾಲ್, ರಸೂಲ್, ಶಿರಾಜ ಮುರಾಳ, ಸಮೀರ ಮುರಾಳ, ಆಶೀಫ್ ಮುರಾಳ, ಇಲಿಯಾಸ ಮುರಾಳ, ಲಾಡ್ಲೇಮಶಾಕ, ದೌಲಮಲಿಕ, ನೂರ ಮುರಾಳ, ಹಾಗೂ ಮುಖಂಡರುಗಳಾದ ಬಸನಗೌಡ ಕುಪ್ಪಿ, ಸಂಗನಗೌಡ ಅಸ್ಕಿ, ಪುರಸಭಾ ಅಧ್ಯಕ್ಷ ಸಂಗಮೇಶ ಇಂಗಳಗಿ, ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಶೌಕತ್ ಲಾಹೋರಿ, ಮೊದಲಾದವರು ಉಪಸ್ಥಿತರಿದ್ದರು.