ಸಿಂಧನೂರು.ಜೂ.೧೬-
ಡೆಂಗ್ಯೂ, ಮಲೇರಿಯಾ ಚಿಕನಗುನ್ಯ, ದಂಥಹ ಕಾಯಿಲೆಗಳು ಮಳೆಗಾಲದಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದು ನಿಂತಿದ್ದ ನೀರಿನಿಂದ ಆದ್ದರಿಂದ ಮಳೆ ನೀರು ಮನೆ ಹಾಗೂ ಸುತ್ತಮುತ್ತ ನಿಲ್ಲದಂತೆ ನೋಡಿ ಜನರು ನೋಡಿಕೊಂಡರೆ ಈ ರೋಗಗಳು ಬರುವುದಿಲ್ಲ ಎಂದು ತಾಲುಕಾ ಮಲೇರಿಯಾ ತಾಂತ್ರಿಕ ಮೇಲ್ವಿಚಾರಕರಾದ ಎಫ್.ಎ ಹಣಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಮಸ್ಕಿ ತಾಲುಕಿನ ಉಮಲೂಟಿ ಗ್ರಾಮದ ಮುರಾರ್ಜಿ ಮಕ್ಕಳ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಪ್ರೌಢ ಶಾಲಾ ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಪನ್ಯಾಸ ನೀಡಿದ ಅವರು ಮಳೆಗಾಲದಲ್ಲಿ ಜನರಿಗೆ ಬರಬಹುದಾದ ಮಲೇರಿಯಾ, ಡೆಂಗ್ಯೂ, ಚಿಕನಗುನ್ಯಾ ದಂಥಹ ರೋಗಗಳು ಸೊಳ್ಳೆಗಳಿಂದ ಹರಡದಂತೆ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ಮಳೆಗಾಲದಲ್ಲಿ ನಿಂತ ನೀರಿನಿಂದ ಜನ ಉಪಯೋಗಿಸುವ ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಮ್‌ಗಳ ಸ್ವಚ್ಛತೆಯ ಬಗ್ಗೆ ನಿಗಾವಹಿಸದಿದ್ದರೆ ಸೊಳ್ಳೆಗಳು ಬೆಳೆದು ರೋಗಗಳು ಹರಡುವದರಿಂದ ಜನರ ಆರೋಗ್ಯ ಹದಗೆಡಿಸುತ್ತೆದೆ ಆದ್ದರಿಂದ ಜನರಿಗೆ ಆರೋಗ್ಯದ ಜೊತೆಗೆ ಶಿಕ್ಷಣ ಮುಖ್ಯ ಎಂದರು.
ಕಾಲಕಾಲಕ್ಕೆ ಸೊಳ್ಳೆ ಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕಾಗಿ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಆರೋಗ್ಯ ಇಲಾಖೆ ವತಿಯಿಂದ ಮನೆ ಮನೆಗೆ ಹೋಗಿ ಜನರನ್ನು ಬೇಟಿ ಮಾಡಿ ಆವರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುವುದು ಸ್ವಚ್ಛತೆ ಬಗ್ಗೆ ಗಮನ ಹರಿಸುವದು ಯುವಕರ ಪಾತ್ರ ಅತಿ ಮುಖ್ಯ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿಯಾದ ಬಸ್ಸಯ್ಯ ಮಾತನಾಡಿದರು.
ತಾಲೂಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗೀತಾ ಹಿರೇಮಠ ಮಾತನಾಡಿ ಮಳೆಗಾಲದಲ್ಲಿ ಸೊಳ್ಳೆಯ ಮರಿಯಾದ ಲಾರ್ವಾ ಸಮೀಕ್ಷೆಯನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದ್ದು ಆರೋಗ್ಯ ಇಲಾಖೆಯ ಜೊತೆಗೆ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಮಲೇರಿಯಾ, ಡೆಂಗ್ಯು, ಜ್ವರ ಬಾರದಂತೆ ನಿಯಂತ್ರಣ ಮಾಡಬಹುದು ಎಂದು ತಾಲುಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಗೀತಾ ಹಿರೇಮಠ ಶಾಲೆಯ ಮಕ್ಕಳಲ್ಲಿ ಅರಿವು ಮೂಡಿಸಿದರು.
ಮನೆಯಲ್ಲಿ ಸೊಳ್ಳೆ ಸಾಂದ್ರತೆಗೆ ಅನುಗುಣವಾಗಿ ಸೊಳ್ಳೆ ಬತ್ತಿ, ಸೊಳ್ಳೆ ಪರದಿ ಬಳಸಬೇಕು ಮನೆಯಲ್ಲಿ ಬಳಸುವ ಸಿಮೆಂಟ್ ತೊಟ್ಟಿಯ ನೀರು ತುಂಬುವ ಬ್ಯಾರಲ,ಡ್ರಮ,ಕೇಲು ಇತ್ಯಾದಿ ಪರಿಕರಗಳನ್ನು ವಾರದಲ್ಲಿ ೨ ಸಲ ಸ್ವಚ್ಛ ವಾಗಿ ತೊಳೆದು ಸೊಳ್ಳೆಗಳು ಒಳಗೆ ನುಸುಳದಂತೆ ಮತ್ತು ಮರಿ ಹಾಕದಂತೆ ಮುಚ್ಚಿಡಬೇಕು ಅಥವಾ ಮುಚ್ಚಲು ಹಳೆಯ ಬಟ್ಟೆಗಳನ್ನು ಬಳಸಬೇಕು ಹೊರಾಂಗಣದಲ್ಲಿ ಇರುವ ಟೆಂಗಿನ ಚಿಪ್ಪು, ಒಡೆದ ಬಾಟಲ್‌ಗಳು, ಬಳಕೆಗೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಮನೆಯಲ್ಲಿ ಶೇಖರಿಸಿ ಇಡದೆ ಕಸದ ತೊಟ್ಟಿಗೆ ಹಾಕಿ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು ಇದರಿಂದ ಯಾವದೆ ರೋಗ ರುಜಿನಗಳು ಬರುವುದಿಲ್ಲ. ಜ್ವರ ಬಂದರೆ ಕೂಡಲೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ವೈದ್ಯರ ಹತ್ತಿರ ರಕ್ತ ಪರೀಕ್ಷೆ ಮಾಡಿಸಿ ಕೊಳ್ಳುವಂತೆ ಗೀತಾ ಹಿರೇಮಠ ಜನರಲ್ಲಿ ಮನವಿ ಮಾಡಿಕೊಂಡರು.
ಆಶಾ ಕಾರ್ಯಕರ್ತೆಯರ ತಾಲೂಕಾ ಮೇಲ್ವಿಚಾರಕಿ ಆರೋಗ್ಯಮ್ಮ, ಉಮಲೂಟಿ ಸಮುದಾಯ ಆರೋಗ್ಯಾಧಿಕಾರಿ ನಿವೇದಿತಾ, ಆಶಾ ಕಾರ್ಯಕರ್ತೆ, ಶಶಿಕಲಾ, ರಾಜೇಶ್ವರಿ, ಸೇರಿದಂತೆ ಮುರಾರ್ಜಿ ವಸತಿ ಶಾಲೆಯ ಪ್ರಾಶುಂಪಾಲರು, ಸಿಬ್ಬಂದಿಗಳು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.