ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಆರೋಗ್ಯ ಸಿಂಚನ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.06: ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ಸಿಂಚನ ಕಾರ್ಯಕ್ರಮವನ್ನು ನಡೆಸಲಾಯಿತು.
ತಾಲ್ಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿರುವ  ಮುರಾರ್ಜಿ ವಸತಿ ಶಾಲೆಯ ಮಕ್ಕಳಿಗೆ ಸಿಇಓ ರವರ ಆಶಯದಂತೆ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ತಾಲೂಕು ಆರೋಗ್ಯ ಆಡಳಿತ ಸಿರುಗುಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿಯನ್ನು ಮೂಡಿಸಲಾಯಿತು.
ಅನಾರೋಗ್ಯ ಎನ್ನುವುದು ವಿಧಿಯ ಆಟವಲ್ಲ, ಉತ್ತಮ ಆರೋಗ್ಯ ಬೇಕು, ಬೇಡ ಎಂಬುವುದು ಸ್ವತಃ ನಾವು ನಿರ್ಧರಿಸಿಕೊಳ್ಳಬೇಕಾಗಿದೆ. ನಮ್ಮ ಆರೋಗ್ಯ, ನಮ್ಮ ಜವಾಬ್ದಾರಿ ಎಂಬುವುದನ್ನು ನಾವು ಅರಿತು ಕೊಂಡರೆ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ, ಉತ್ತಮ ಪರಿಸರ ಹಾಗೂ ವ್ಯಾಯಾಮ ಇತ್ಯಾದಿಗಳ ಕುರಿತು ಜಾಗೃತಿವಹಿಸಬೇಕು ಎಂದು ತಾಲೂಕು ವ್ಯೆದ್ಯಾಧಿಕಾರಿ ಡಾ.ಈರಣ್ಣ ತಿಳಿಸಿದರು.
ಉತ್ತಮ ಆರೋಗ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ, ಅದ್ದರಿಂದ ಹದಿಹರೆಯದವರ ಆರೋಗ್ಯ, ಕ್ಷಯರೋಗ,ಕುಷ್ಠರೋಗ,ಋತುಚಕ್ರ ನೈರ್ಮಲ್ಯ,ಮಲೇರಿಯಾ,ಡೆಂಗಿ,ಚಿಕೂನ್ ಗುನ್ಯಾ,ಆನೆಕಾಲು ರೋಗ ಇತರ ಹಲವು ರೋಗದ ವಿಷಯಗಳ ಕುರಿತು ವಿಶ್ಲೇಷಣೆಯನ್ನು ಆರೋಗ್ಯ ಶಿಕ್ಷಣಾ ಅಧಿಕಾರಿ ಮಹಮ್ಮದ್ ಕಾಸಿಂ ಹೇಳಿದರು.
ಶಿಕ್ಷಣ ಸಂಯೋಜಕರಾದ ಬಸವರಾಜಯ್ಯ, ಟಿ.ಎಂ ಶಾಂತ ಮತ್ತು ವಸತಿ ನಿಲಯದ ಪ್ರಾಂಶುಪಾಲ, ಶಿಕ್ಷಕರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಭೀಮರೆಡ್ಡಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ರಾಜೋಟ್ಟಯ್ಯ ಆರೋಗ್ಯ ನಿರೀಕ್ಷಿಣ ಅಧಿಕಾರಿ, ಸುನಿತಾ ಸ್ಟಾಫ್ನರ್ಸ್ ಮತ್ತು ಇತರರು ಉಪಸ್ಥಿತರಿದ್ದರು.