ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಲಿಂಗಸೂಗೂರ,ಮೇ.೧೭- ಮುರಾರ್ಜಿ ದೇಸಾಯಿ ವಸತಿ ಅಡವಿಭಾವಿ ಶಾಲೆಯಲ್ಲಿ ೨೦೨೨-೨೩ನೇ ಸಾಲಿನಲ್ಲಿ ಹತ್ತನೇಯ ತರಗತಿ ವಿದ್ಯಾರ್ಥಿಗಳ ಫಲಿತಾಂಶ ೧೦೦% ರಷ್ಟು ಬಂದಿದೆ ಎಂದು ಪ್ರಾಂಶುಪಾಲರು ನಾಗಭೂಷಣ ನಾಗರಹಾಳ ತಿಳಿಸಿದರು.
೨೦೨೩ನೇ ಸಾಲಿನಲ್ಲಿ ಒಟ್ಟು ೪೬ ವಿದ್ಯಾರ್ಥಿಗಳಲ್ಲಿ ೪೬ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ, ಅದರಲ್ಲಿ ೨೩ ವಿದ್ಯಾರ್ಥಿಗಳು ಜಿಲ್ಲೆಯ ಪ್ರಥಮ, ೨೩ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಪಡೆದುಕೊಂಡು ಶಾಲೆಗೆ ೧೦೦% ರಷ್ಟು ಫಲಿತಾಂಶ ಬಂದಿದೆ, ಪ್ರಥಮ ಸ್ಥಾನದಲ್ಲಿ ಈರಮ್ಮ ವಿ-೫೯೨ (೯೪.೭೨%), ದ್ವೀತಿಯ ಮುನ್ನಮ್ಮ-೫೮೧(೯೨.೯೬%), ತೃತೀಯ ಶಿವರಾಜ-೫೮೦(೯೨.೮೦%) ಪಡೆದುಕೊಂಡಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಲು ಚಿತ್ರಕಲಾ, ಆಧ್ಯಾತ್ಮಿಕ ಶಕ್ತಿಗಳನ್ನು ಹೊರಹೋಮ್ಮಿಸಲು, ಸಂಗೀತ, ಕ್ರೀಡೆ, ಮಾನಸಿಕವಾಗಿ ಹಾಗೂ ಪೋಷಕರ ಸಭೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಾಲೆಯ ಪ್ರಾಂಶುಪಾಲರು ನಾಗಭೂಷಣ ನಾಗರಹಾಳರವರ ಶ್ರಮದಿಂದ ಎಲ್ಲಾ ಶಿಕ್ಷಕ ವೃಂದವರು ಶ್ರಮವಹಿಸಲಿದ್ದಾರೆ ಎಂದು ಚಿತ್ರಕಲಾ ಶಿಕ್ಷಕ ಪರಶುರಾಮ್ ನಗನೂರ ತಿಳಿಸಿದರು.
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಶಿಕ್ಷಕರು ಶರಣಬಸವ, ಭೀಮನಗೌಡ, ಶರಣಪ್ಪ, ಅಮರೇಶ, ಪಂಚಾಕ್ಷರಿ, ಮಂಜುನಾಥ, ವಿಜಯಕುಮಾರ ಅಡವಿಭಾವಿ, ಚಂದ್ರಿಕಾ, ಸುಮ್ಮತಿ, ವಿಜಯಲಕ್ಷ್ಮೀ, ಸ್ಟಾಫ್ ನರ್ಸ್ ಸಮಿನ ಯಾಸ್ಮಿನ್ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.