ಮುರಾಜಿ ದೇಸಾಯಿ ಮಾದರಿ ವಸತಿ ಶಾಲೆ : ಮಕ್ಕಳು ವಾಲಿಬಾಲ ಕ್ರೀಡೆಯಲ್ಲಿ ಪ್ರಥಮ ಸ್ಥಾನ

ಅರಕೇರಾ.ಜು.೨೭- ದೇವದುರ್ಗ ತಾಲ್ಲೂಕಿನ ಅರಕೇರಾ ವಲಯ ಮಟ್ಟದ ಕ್ರೀಡಾಕೂಟ ೨೦೨೨-೨೩ ನೆ ಸಾಲಿನ ಶಿವಂಗಿ ಗ್ರಾಮದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ ೨೫-೭-೨೦೨೨ ರಂದು ನಡೆಯಿತು.
ಕ್ರೀಡಾ ಕೂಟದಲ್ಲಿ ಮುರಾಜಿದೇಸಾಯಿ ಮಾದರಿ ವಸತಿ ಶಾಲೆಯ ಆಲ್ಕೋಡದ ಬಾಲಕರ ವಾಲಿಬಾಲ ಪ್ರಥಮ ಸ್ಥಾನ ಪಡೆದು ತಾಲ್ಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಪ್ರಾಚಾರ್ಯರಾದ ಶಶಿಧರ ರಂಗದಾಳ ಪತ್ರಿಕೆ ತಿಳಿಸಿದ್ದಾರೆ.
ನಮ್ಮ ಶಾಲೆಯ ಮಕ್ಕಳು ಉತ್ತಮ ತರಬೇತಿ ಪಡೆದು ಅರಕೇರಾ ವಲಯ ಮಟ್ಟದಲ್ಲಿ ವಾಲಿಬಾಲ ಆಟದಲ್ಲಿ ಪ್ರಥಮಸ್ಥಾನ ಪಡೆದುಮುರಾಜಿದೇಸಾಯಿ ಮಾದರಿ ವಸತಿ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿತಂದುಕೊಟ್ಟಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ ಸಹಶಿಕ್ಷಕರಾದ ಆಜಪ್ಪ, ಧೀಪಕ, ಶಾಹೀನಬೇಗಂ ,ಶಿವುಕುಮಾರ, ರುದ್ರಗೌಡ, ರಮೇಶ, ಮಹೇಶ ದೈಹಿಕ ಶಿಕ್ಷಕರಾದ ಪ್ರಕಾಶ ಹಾಗೂ ಆಲ್ಕೋಡಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳು, ಕ್ರೀಡಾಪ್ರೇಮಿಗಳು ಅಭಿನಂಧಿಸಿದ್ದಾರೆ.