ಮುರಳಿಧರ ಕರಲಗಿಕರ್‍ಗೆ ರಾಜ್ಯ ಮಟ್ಟದ ಪ್ರಶಸ್ತಿ

ಕಲಬುರಗಿ:ನ.18: ನಗರದ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಮುರಳೀಧರ ಜಿ. ಕರಲಗಿಕರ್ ಅವರು ರಾಜ್ಯ ಮಟ್ಟದ ಶಂಕರಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವೆಂಬರ್ 22ರಂದು ಮಧ್ಯಾಹ್ನ 12 ಗಂಟೆಗೆ ಬಾಗಲಕೋಟೆಯ ಸೀಗಿಕೇರಿಯಲ್ಲಿ ನಡೆಯಲಿರುವಜಾನಪದ ಜಾತ್ರೆ’ ಕಾರ್ಯಕ್ರಮದಲ್ಲಿ ಕರಲಗಿಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಕರಲಗಿಕರ್ ಅವರು ವೃತ್ತಿಯಿಂದ ಸಿವಿಲ್ ಇಂಜಿನಿಯರರಾಗಿದ್ದು ಕಳೆದ 25 ವರ್ಷಗಳಿಂದಲೂ ಕಲಬುರಗಿಯಲ್ಲಿ ನೂರಾರು ಮನೆ, ಅಪಾರ್ಟ್‍ಮೆಂಟ್, ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಕೋವಿಡ್ ಸಂಕಷ್ಟದ ವೇಳೆ ಹಲವಾರು ಬಡವರು, ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸಿದ್ದರು. ಅಲ್ಲದೇ ರೈತರು ಬೆಳೆದ ಹಣ್ಣು, ತರಕಾರಿಗಳ ಖರೀದಿಗೆ ತಾತ್ಕಾಲಿಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ನೆರವಾಗಿದ್ದರು.