ಮುರಳಿಗೌಡಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

ಕೋಲಾರ,ಜೂ,೧೧- ತಾಲೂಕಿನ ವೇಮಗಲ್ ಹೋಬಳಿಯ ಸೀತಿಹೊಸೂರು ಗ್ರಾಮದ ಮುರಳಿಗೌಡ ಅವರ ಸಮಾಜಸೇವೆಯನ್ನು ಗುರುತಿಸಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರತಿ ವರ್ಷದಂತೆ ಕನ್ನಡ ಸಾಹಿತ್ಯ ಸಂಭ್ರಮ ಹೆಸರಿನಲ್ಲಿ ಕೊಡುವ ಪ್ರಶಸ್ತಿ ಇದಾಗಿದ್ದು ನಾಡಿನ ಹೆಸರಾಂತ ವಾಗ್ಮಿಗಳು ಹಾಗೂ ಚಲನಚಿತ್ರ ನಟ ಡಾ ಚಿಕ್ಕಹೆಜ್ಜಾಜಿ ಮಹದೇವ್, ಶ್ರೀ ಸಿದ್ದರೂಢ ಮಿಷನ್ ಆಶ್ರಮದ ಡಾ.ಆರೂಢ ಭಾರತೀ ಮಹಾಸ್ವಾಮಿ, ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ, ಲೇಖಕಿ ಆಶಾ ಶಿವು, ಸಂಘಟಕ ಶಿವಣ್ಣ ಸೇರಿದಂತೆ ಅನೇಕ ಮಹನೀಯರು ಸಮ್ಮುಖದಲ್ಲಿ ಮುರಳಿಗೌಡರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.