ಮುರಘಾಮಠದಲ್ಲಿ ವಿನಯ್ ಕುಲಕರ್ಣಿ ಹುಟ್ಟುಹಬ್ಬ ಆಚರಣೆ

ಧಾರವಾಡ ನ 8: ಧಾರವಾಡದ ಮುರುಘಾಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ್ ಪಾಟೀಲ್ ಹಾಗೂ ಮಠದ ಪೂಜ್ಯರಿಂದ ವಿಶೇಷವಾಗಿ ಆಚರಿಸಲಾಯಿತು.
ಸಿಬಿಐ ವಶದಲ್ಲಿರುವ ವಿನಯ್ ಕುಲಕರ್ಣಿ ಅವರಿಗೆ ಡಾ.ರಾಜಕುಮಾರ ಅವರ ಕಸ್ತೂರಿ ನಿವಾಸ ಸಿನಿಮಾದ ಆಡಿಸಿ ನೋಡು.. ಬೀಳಿಸಿ ನೋಡು.. ಉರುಳಿ ಹೋಗನು ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗನು ಎಂದಿಗೂ ನಾನು ಹೀಗೆ ಇರುವೇ ಎಂದು ನಗುವನು…….. ವಿನಯ್ ನಗುತಲಿರುವನು ಎಂದು ಹಾಡುವ ಮೂಲಕ ವಿನಯ್ ಕುಲಕರ್ಣಿ ಅವರಿಗಾಗಿ ಹಾಡಿದರು. ಅಲ್ಲದೇ ಅಭಿಮಾನಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ದೈರ್ಯ ತುಂಬಿದರು.
ವಿನಯ್ ಕುಲಕರ್ಣಿ ಅವರು ಈ ಪ್ರಕರಣದಿಂದ ಹೊರ ಬಂದು ಈಗಿರುವುದಕ್ಕಿಂತ 10 ಪಟ್ಟು ಶಕ್ತಿ ಶಾಲಿಯಾಗಿ ಬೆಳೆಯುತ್ತಾರೆ. ಚೆಂಡು ನೆಲಕ್ಕೆ ಒಗೆದಷ್ಟು ಜೋರಾಗಿ ಪುಟಿದೇಳುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ಡಿ.ಕೆ.ಶಿವಕುಮಾರ ಅವರು. ಅದೇ ರೀತಿ ವಿನಯ್ ಮತ್ತೇ ಪುಟಿದೇಳುತ್ತಾರೆ ಎಂದು ಅನಿಲಕುಮಾರ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಠದ ಪೂಜ್ಯರು, ಪಕ್ಷದ ಕಾರ್ಯಕರ್ತರು ಹಾಗೂ ವಿನಯ್ ಕುಮಾರ್ ಕುಲಕರ್ಣಿ ಅಭಿಮಾನಿಗಳು ಉಪಸ್ಥಿತರಿದ್ದರು.