ಮುನ್ಸಿಪಾಲ್ ಮೈದಾನದಲ್ಲಿದ್ದ ಜೋಡಿ ಮರಗಳು ಮಾಯ! ಸಾಮಾಜಿಕ ಜಾಲತಾಣಕ್ಕೆ ಆಹಾರ

ಹೊಸಪೇಟೆ ಮೇ4: ನಗರದ ಮುನ್ಸಿಪಾಲ್ ಮೈದಾನದಲ್ಲಿದ್ದ ಎರಡು ಜೋಡಿ ಹಕ್ಕಿಯಂತಿದ್ದ ಬೃಹದಾಕಾರದ ಮರಗಳು ಇದ್ದಕ್ಕಿಂದಂತೆ ನೆಲಕ್ಕೂರಳಿದ ಘಟನೆ ಸೋಮವಾರ ನಡೆದಿದೆ.
ನಗರದ ಮುನ್ಸಿಪಾಲ್ ಮೈದಾನದಲ್ಲಿದ್ದ ಗಿಡಗಳನ್ನು ಕಡೆಯಲು ಟೆಂಡರ್ ಕರೆದ ನಗರಸಭೆಯ ಪೌರಾಯುಕ್ತರೇ ಟೆಂಡರ್ ದಿನಾಂಕಕ್ಕೂ ಮುನ್ನವೇ ಕಡಿದು ಮುಗಿಸಿದ ದಾರುಣ ಘಟನೆ ಜರುಗಿದೆ.
ಹೊಸಪೇಟೆ ನಗರಸಭೆಯ ಪೌರಾಯುಕ್ತರು ಮೇ 1 ರಂದು ಈ ಗಿಡ ಕತ್ತರಿಸಲು ಬಹಿರಂಗ ಟೆಂಡರ್ ಕರೆದು ಪ್ರತಿಕಾ ಪ್ರಕಟಣೆ ನೀಡಿದ್ದು ಮೇ 6 ರಂದು ಬಹಿರಂಗ ಹರಾಜು ಮೂಲಕ ಕತ್ತರಿಸಲು ಪ್ರಕಟನೆಯಲ್ಲಿ ತಿಳಿಸಿದ್ದು ಸರಿಯಷ್ಟೇ ಮೇ 3 ರಂದೇ ಗಿಡಗಳನ್ನು ಕಡಿದು ಮುಗಿಸುವ ಮೂಲಕ ಸರ್ಕಾರಿ ನಿಯಮಗಳು ನಮಗೆ ಯಾವುದು ಲೆಕ್ಕಕ್ಕೆ ಇಲ್ಲ ಎಂಬುದನ್ನು ರುಜುವಾತು ಮಾಡಿದ್ದಾರೆ.
ಈ ಮದ್ಯ ಸಂಜೆವಾಣಿಯೊಂದಿಗೆ ಮಾತನಾಡಿದ ಪೌರಾಯುಕ್ತರು ನಗರದ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕಾರ್ಯ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಮರವನ್ನು ತೆರವುಗೊಳಿಸಲು ಮುಂದಾಗಿರುವುದಾಗಿ ತಿಳಿಸಿದರು.
ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವಿರೋಧ:
ಅನೇಕರು ನಗರದ ಮಧ್ಯಭಾಗದಲ್ಲಿರುವ ಈ ಜೋಡಿ ಮರಗಳನ್ನು ಏಕೆ ಕತ್ತರಿಸುತ್ತಿದ್ದಾರೆ, ಆಕ್ಸಿಜನ್ ಕೊರತೆಯ ಈ ಅವಧಿಯಲ್ಲಿ ಯಾಕೆ ಕತ್ತರಿಸಲಾಗುತ್ತಿದೆ ಏಂಬಲ್ಲಾ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹರಿಬಿಡುತ್ತಿದ್ದಾರೆ. ಅಲ್ಲದೆ ಯಾರು ಸುಳಿಯದಂತೆ ಕಾವಲು ಸಹ ಹಾಕಿದ್ದು ಅನೇಕ ಅನುಮಾನಗಳಿಗೆ ಕಾರಣವಾಗದೆ. ಒಂದು ಅಂದಾಜಿನ ಪ್ರಕಾರ ರಾಜಕೀಯ ಒತ್ತಡಗಿಳಿಂದಾಗಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಎಂಬೆಲ್ಲಾ ಪ್ರಶ್ನೆಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ.
ಇನ್ನೊಂದಡೆ ಅತ್ಯಂತ ಹಳೆಯ ಹಾಗು ಹಿರಿಯ ಜೀವದಂತಿದ್ದ ಈ ಮರಗಳನ್ನು ಉಳಿಸಿಕೊಂಡೇ ಏನಾದರೂ ಮಾಡಬಹುದಿತ್ತು ಎಂಬ ಮತ್ತೊಂದು ರೀತಿ ಸಂದೇಶ ಹೀಗೆ ಅನೇಕ ಅನುಮಾನಗಳ ಸಂದೇಶಕ್ಕೆ ಆತುರದ ಕ್ರಮ ಚೆರ್ಚೆಗೆ ಗ್ರಾಸವಾಗಿದೆ.
ಮತ್ತೊಂದಡೆ ಕನಿಷ್ಟ ಅಧಿಕಾರ ಹಾಗೂ ಕಾನೂನಿನ ಚೌಕಟ್ಟಿನೊಳಗಾಗದರೂ ಅವರಿಗೆ ಸಹಾಯ ಮಾಡಬಹುದಾಗಿತು ಎಂಬ ಕನಿಷ್ಠ ಸೌಜನ್ಯವನ್ನು ಅಧಿಕಾರಿಗಳು ಮರೆತಿರುವುದು ದುರಾದೃಷ್ಟಕರ ಎಂಬುದು ಸಾರ್ವಜನಿಕ ವಲಯದಲ್ಲಿ ಚೆರ್ಚೆಗೆ ಗ್ರಾಸವಾಗಿದೆ.