ಮುನ್ನೆಲೆಗೆ ಬಂದ ಮಹಿಳಾ ಸಾಹಿತಿಗಳು; ಬಣ್ಣನೆ

ದಾವಣಗೆರೆ.ಜು.೧೭: ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಎರಡನೇ ದರ್ಜೆ ನಾಗರೀಕರನ್ನಾಗಿ ನೋಡುವ  ದಿನಮಾನದ ಸಂದರ್ಭದಲ್ಲಿ ಮಹಿಳಾ ಸಾಹಿತಿಗಳು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದೇವೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ, ವನಿತಾ ಸಮಾಜ ಹಾಗೂ ಕರ್ನಾಟಕ ಲೇಖಕಿಯರ ಸಂಘ, ದಾವಣಗೆರೆ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಹಿರಿಯ ಸಾಹಿತಿ ಗಿರಿಜಾ ಅವರ ಸಂಸ್ಕರಣೆ , ದತ್ತಿ ಉಪನ್ಯಾಸ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ  ಪಾಲ್ಗೊಂಡು ಸಾಹಿತಿ ಟಿ.ಗಿರಿಜಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಟಿ.ಗಿರಿಜಾ ಅವರುಹಲವಾರು ಹಳ್ಳಿಗಳನ್ನು ಸುತ್ತಿ 500ಪುಟಕ್ಕೂ ಹೆಚ್ಚಿನ ಪುಸ್ತಕ ಬರೆದು ಯಶಸ್ವಿ ಅಗಿ ದಾಖಲೆ ಬರೆದರು. ಭಾರತದ ನದಿಗಳು ಪುಸ್ತಕ ಬರೆದು ಸುಮಾರು 2ಸಾವಿರಕ್ಕೂ ಹೆಚ್ಚು ನದಿಗಳ ಮಾಹಿತಿ ಕ್ರೋಢೀಕರಿಸಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು. ಆರಂಭದಲ್ಲಿ ಮಹಿಳಾ ಸಾಹಿತಿಗಳನ್ನು ಹುಡುಕುವುದು ಕಷ್ಟ ಅಗಿತ್ತು. ಆದರೆ, ಈ ವೇದಿಕೆಯು ಎಲೆ ಮರೆ ಕಾಯಿಯಂತೆ ಇದ್ದ ಪ್ರತಿಭೆಗಳನ್ನು ಹೊರತಂದಿದೆ‌. ಹಲವಾರು ದಿಗ್ಗಜರನ್ನು ದಾವಣಗೆರೆಗೆ ಕರೆಸಿ ಸಾಹಿತ್ಯದ ರಸದೌಟಣ ಉಣಬಡಿಸಲಾಯಿತು ಎಂದು ಮಾಹಿತಿ ನೀಡಿದರು.ವ್ಯಂಗ್ಯ ಚಿತ್ರಕಾರ ಹೆಚ್.ಬಿ.ಮಂಜುನಾಥ್ ದತ್ತಿ ಉಪನ್ಯಾಸ ನೀಡಿದರು. ಇ ವೇಳೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ, ಟಿ.ಎಸ್.ಶೈಲಜಾ, ಶಿವಮೊಗ್ಗದ ಸಾಹಿತಿ ವಿಜಯಾ ಶ್ರೀಧರ್, ಸುಭಾಷಿಣಿ ಮಂಜುನಾಥ್, ಲೇಖಕರಾದ ವೀಣಾ ಕೃಷ್ಣಮೂರ್ತಿ, ಗಿರಿಜಾ ಸಿದ್ದಲಿಂಗಪ್ಪ, ಕೆ.ಆರ್.ಸುಮತೀಂದ್ರ ಇತರರು ಇದ್ದರು.ಇದೇ ವೇಳೆ ತವರಿನ ಸೊಬಗು, ದೀಪಗಳು ಮಾತನಾಡಿದವು, ಮರೀಚಿಕೆ ಹಾಗೂ ಮೇಘ ಸಂದೇಶ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.