ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ರಾಯಚೂರು,ಮೇ.೧೯- ಜಿಲ್ಲೆಯಲ್ಲಿ ಹಿಂದಿನ ೪ ದಿನಗಳಲ್ಲಿ ಗರಿಷ್ಟ ತಾಪಮಾನ ೪೦ಡಿ. ಸೆ. ಗಿಂತ ಹೆಚ್ಚಿದ್ದು, ಮುಂದಿನ ೨ ದಿನಗಳಲ್ಲಿ ಗರಿಷ್ಟ ತಾಪಮಾನ ೪೦ ಡಿ. ಸೆ.ಗಿಂತ ಹೆಚ್ಚು ಮುಂದುವರಿಯುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿನ ಎಲ್ಲಾ ಹಿರಿಯ ನಾಗರೀಕರು, ಮಕ್ಕಳು, ವ್ಯಾಪಾರಸ್ಥರು,ಆದಷ್ಟು ಮೂರು ದಿನ ಯಾರು ಕೂಡ ಅನವಶ್ಯಕ ಹೊರಗಡೆ ಹೋಗುವುದನ್ನ ನಿಲ್ಲಿಸಿ, ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹವಾಮಾನ ಇಲಾಖೆಯವರು ತಿಳಿಸಿದ್ದಾರೆ.