
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.15: ನಗರದ ಜೆಡಿಎಸ್‌ನ ನಿಯೋಜಿತ ಅಭ್ಯರ್ಥಿ ಮುನ್ನಾಬಾಯಿ ಅವರ ತಾಯಿ ಬಿ.ಬಿ.ಫಾತಿಮಾ (83) ನಿನ್ನೆ ಇಹ ಲೋಕ ತ್ಯಜಿಸಿ ಅಲ್ಲಾಹುವಿನ ಪಾದ ಸೇರಿದ್ದಾರೆ.
ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬಳ್ಳಾರಿಯ ಗುಗ್ಗರಹಟ್ಟಿ ಪ್ರದೇಶದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಐದು ಹೆಣ್ಣು ಮಕ್ಕಳು ಮತ್ತು ಮುನ್ನಾಬಾಯಿ ಒಬ್ಬರೇ ಪುತ್ರರಿದ್ದರು
ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಜಿಲ್ಲಾ ಅಧ್ಯಕ್ಷ ಸೋಮಲಿಂಗನಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ, ಬಿಜೆಪಿ, ಕಾಂಗ್ರೆಸ್, ಆಪ್ ಪಕ್ಷ, ಸಿಐಟಿಯು, ಕೆಆರ್ ಪಿಪಿ ಮುಂತಾದ ಎಲ್ಲಾ ರಾಜಕೀಯ ಮುಖಂಡರು ಮತ್ತು ಮುಸ್ಲಿಂ ಧರ್ಮಗುರುಗಳು, ಮುಸ್ಲಿಂ ಬಾಂಧವರು ಸಂತಾಪ ವ್ಯಕ್ತ ಪಡಿಸಿದ್ದಾರೆ.