’ಮುನ್ನಾಭಾಯಿ ೩’ ಫಿಲ್ಮ್ ನ ಶೂಟಿಂಗ್ ಯಾಕೆ ತಡವಾಗುತ್ತಿದೆಯೋ? ಅರ್ಶದ್ ವಾರ್ಸಿಗೂ ಗೊತ್ತಾಗ್ತಿಲ್ಲ!

ನಟ ಅರ್ಶದ್ ವಾರ್ಸಿ ಫಿಲ್ಮ್ ’ಮುನ್ನಾಭಾಯಿ ೩’ ಅರ್ಥಾತ್ ಮುನ್ನಾಭಾಯಿ ಮೂರನೇ ಭಾಗವನ್ನು ಮುಂದಿಟ್ಟು ಒಂದು ಸಂಗತಿ ಬಹಿರಂಗ ಪಡಿಸಿದ್ದಾರೆ. ಮುನ್ನಾಭಾಯಿ ೩ ಇದರ ಮೂರು ಸ್ಕ್ರಿಪ್ಟ್ ಗಳು ರೆಡಿ ಇವೆ.ಇದರ ಹೊರತಾಗಿಯೂ ಭವಿಷ್ಯದಲ್ಲಿ ಫಿಲ್ಮ್ ನ ಮೂರನೇ ಪಾರ್ಟ್ ನ ಶೂಟಿಂಗ್ ಆರಂಭವೇ ಆಗುತ್ತಿಲ್ಲ ಯಾಕೆ? ಎನ್ನುವುದು ಅನೇಕ ದಿನಗಳಿಂದ ಚರ್ಚೆಯಾಗುತ್ತಿದೆ. ಯಾಕೆ ಶೂಟಿಂಗ್ ಆರಂಭವಾಗುತ್ತಿಲ್ಲ ಎನ್ನುವುದು ನನಗೂ ಅರ್ಥವಾಗುತ್ತಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.


ಮುನ್ನಾಭಾಯಿ ೩ ಗಾಗಿ ಮೂರು ಸ್ಕ್ರಿಪ್ಟ್ ಗಳು ರೆಡಿ ಇವೆ. ಪ್ರೊಡ್ಯೂಸರ್ ಕೂಡ ರೆಡಿ ಇದ್ದಾರೆ. ಆದರೆ ಹೋಲ್ಡ್ ಯಾಕೆ ಮಾಡಲಾಗುತ್ತಿದೆ? ಇದು ಅರ್ಶದ್ ವಾರ್ಸಿಯ ಪ್ರಶ್ನೆ ಕೂಡಾ ಆಗಿದೆ.


೨೦೦೩ ರಲ್ಲಿ ಈ ಸರಣಿಯ ಮೊದಲ ಫಿಲ್ಮ್ ರಿಲೀಸ್ ಆಗಿತ್ತು “ಮುನ್ನಾಭಾಯಿ ಎಂಬಿಬಿಎಸ್”.
ಆನಂತರ ಎರಡನೇ ಪಾರ್ಟ್ ’ಲಗೇ ರಹೋ ಮುನ್ನಾಭಾಯಿ’ ೨೦೦೬ರಲ್ಲಿ ಬಿಡುಗಡೆಗೊಂಡಿತ್ತು.ಆದರೆ ಮೂರನೇ ಭಾಗ ಸ್ಕ್ರಿಪ್ಟ್ ಮತ್ತು ಪ್ರೊಡ್ಯೂಸರ್ ರೆಡಿಯಿದ್ದರೂ ಶೂಟಿಂಗ್ ಯಾಕೆ ಆರಂಭ ಆಗುತ್ತಿಲ್ಲ ಎನ್ನುವುದೇ ತನಗೂ ಗೊತ್ತಾಗುತ್ತಿಲ್ಲ ಎನ್ನುವುದು ಅರ್ಶದ್ ರ ಅಳಲು.

ಸಲ್ಮಾನ್ ಖಾನ್ ರ ಮೊದಲ ಪ್ರೇಯಸಿ ಯಾರು ಗೊತ್ತೇ? ಈ ಬಾರಿ ಹುಟ್ಟುಹಬ್ಬದ ಸರಳ ಆಚರಣೆ

ಮೂರು ದಶಕಗಳ ಫಿಲ್ಮೀ ಕ್ಯಾರಿಯರ್ ನಲ್ಲಿ ಹಲವು ಸೂಪರ್ ಹಿಟ್ ಫಿಲ್ಮ್ ಗಳನ್ನು ನೀಡಿದ ಸಲ್ಮಾನ್ ಖಾನ್ ಈ ಬಾರಿ ಪನ್ವೇಲ್ ನ ಫಾರ್ಮ್ ಹೌಸ್ ನಲ್ಲಿ ತನ್ನ ಕುಟುಂಬ ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಜೊತೆ ಕೊನೆಗೂ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿದರು. ಆಪ್ತರ ಜೊತೆ ಮೀಡಿಯಾದವರು ಕೂಡ ಹಾಜರಿದ್ದರು.

“ಈ ಭಯಾನಕ ವರ್ಷದಲ್ಲಿ ಜನ್ಮದಿನಾಚರಣೆ ಸ್ವಲ್ಪವೂ ಇಷ್ಟ ಇಲ್ಲ” ಎಂದು ಸಲ್ಮಾನ್ ತನ್ನ ಮನದಾಳದ ಮಾತುಗಳನ್ನು ಹೇಳಿದರು. ಮುಂದಿನ ವರ್ಷವು ನಮ್ಮೆಲ್ಲರ ಲೈಫ್ನಲ್ಲಿ ಪಾಸಿಟಿವಿಟಿ ಜೊತೆಗೆ ಆಗಮಿಸಲಿ ಎಂದು ಹಾರೈಸಿದರು.
೨೦೧೬, ೨೦೧೭ ಮತ್ತು ೨೦೧೮ ರಲ್ಲಿ ಫೋರ್ಬ್ಸ್ ಇಂಡಿಯಾದ ನೂರು ಸೆಲೆಬ್ರಿಟಿಗಳ ಸೂಚಿಯಲ್ಲಿ ಮೂರು ವರ್ಷಗಳ ಕಾಲ ಸಲ್ಮಾನ್ ಟಾಪ್ ಇದ್ದರು.

ಅನೇಕರಿಗೆ ಒಂದು ಕುತೂಹಲವಿದೆ. ಸಲ್ಮಾನ್ ಖಾನ್ ಅವರ ಮೊದಲ ಗರ್ಲ್ ಫ್ರೆಂಡ್ ಯಾರು? ಎನ್ನುವ ಬಗ್ಗೆ.
ಆವಾಗ ಸಲ್ಮಾನ್ ರಿಗೆ ಹತ್ತೊಂಬತ್ತು ವರ್ಷ. ಸೈಂಟ್ ಜೇವಿಯರ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿ.
ಸಲ್ಮಾನ್ ರು ಮೊದಲು ಪ್ರೀತಿ ಮಾಡಿದ ಹುಡುಗಿಯ ಹೆಸರು ಶಾಹಿನ ಜಾಫ್ರಿ. ಈಕೆ ಪ್ರಸಿದ್ಧ ನಟ ಅಶೋಕ್ ಕುಮಾರ್ ರ ಮೊಮ್ಮಗಳು.ಅಶೋಕ್ ಕುಮಾರ್ ರ ಮಗಳು ಭಾರತಿಯ ಪುತ್ರಿ.
ಭಾರತಿ ನಟ ಸಯೀದ್ ಜಾಫ್ರಿಯ ಸಹೋದರ ಹಮೀದ್ ಜಾಫ್ರಿಯನ್ನು ಎರಡನೇ ಮದುವೆಯಾಗಿದ್ದರು.
ಹಮೀದ್ ಮತ್ತು ಭಾರತಿ ಅವರಿಗೆ ಎರಡು ಮಕ್ಕಳು.ಜೆನಿವಾ ( ಆಡ್ವಾಣಿ) ಮತ್ತು ಶಾಹಿನ ಜಾಫ್ರಿ.
ಅವಾಗ ಸಲ್ಮಾನ್ ಫಿಲ್ಮ್ ಸ್ಟಾರ್ ಆಗಿರಲಿಲ್ಲ. ಸಲ್ಮಾನ್ ಪರಿವಾರಕ್ಕೆ ಶಾಹಿನ ಕೂಡಾ ಇಷ್ಟವಾಗಿದ್ದಳು. ಆದರೆ ಇವರ ನಡುವೆ ಅಡ್ಡ ಬಂದವಳು ಸಂಗೀತಾ ಬಿಜ್ಲಾನಿ .
ಶಾಹಿನ ಮತ್ತು ಸಲ್ಮಾನ್ ಇಬ್ಬರೂ ಹೆಲ್ತ್ ಕ್ಲಬ್ಬಿಗೆ ಹೋಗುತ್ತಿದ್ದರು.
ಅಲ್ಲಿಗೆ ಸಂಗೀತಾ ಬಿಜ್ಲಾನಿ ಕೂಡ ಬರುತ್ತಿದ್ದರು. ಮುಂದೆ ಸಲ್ಮಾನ್ ಗೆ ಸಂಗೀತಾ ಬಿಜ್ಲಾನಿ ಸ್ನೇಹಿತೆಯಾದರು. ಅತ್ತ ಶಾಹಿನಗೆ ಏರ್ಲೈನ್ಸ್ ನಲ್ಲಿ ನೌಕರಿ ಸಿಕ್ಕಿ ದೂರವಾದಳು. ಸಲ್ಮಾನ್ ಮತ್ತು ಸಂಗೀತಾ ಬಿಜ್ಲಾನಿ ಅವರ ವಿವಾಹದ ತಯಾರಿ ನಡೆದು ಕಾರ್ಡು ಕೂಡ ಪ್ರಿಂಟ್ ಆಗಿತ್ತು. ಆದರೆ ಸಂಗೀತಾ ಯಾಕೋ ನಂತರ ಹಿಂದೆ ಸರಿದರು.

ಸಂಗೀತಾರ ನಂತರ ಸೋಮಿ ಅಲಿ, ಐಶ್ವರ್ಯ ರೈ, ಕತ್ರಿನಾ ಕೈಫ್… ಮೊದಲಾದವರು ಸಲ್ಮಾನ್ ರ ಬದುಕಿನಲ್ಲಿ ಬಂದರು. ಇವರೆಲ್ಲರೂ ಬ್ರೇಕಪ್ ಆದನಂತರ ಈಗ ರೊಮಾನಿಯಾದ ಮಾಡೆಲ್ ನಟಿ ಯೂಲಿಯಾ ವಂತೂರ್ ಜೊತೆ ರಿಲೇಶನ್ ಶಿಪ್ ನಲ್ಲಿ ಇದ್ದಾರೆ.
ಜಸೀಮ್ ಖಾನ್ ಬರೆದ ಸಲ್ಮಾನ್ ರ ಬಯೋಗ್ರಾಫಿ ಬೀಯಿಂಗ್ ಸಲ್ಮಾನ್ ಇದರಲ್ಲಿ ಇಂತಹ ವಿವರಗಳು ದೊರೆಯುವುದು.
ಬೀವಿ ಹೋ ತೋ ಐಸಿ ಯಲ್ಲಿ ಪೋಷಕ ನಟನಾಗಿ ಸಲ್ಮಾನ್ ಎಂಟ್ರಿ ಪಡೆದಿದ್ದರು.

ಸಲ್ಮಾನ್ ಖಾನ್ ರ ಮೊದಲ ಫಿಲ್ಮ್ ’ ಮೈನೆ ಪ್ಯಾರ್ ಕಿಯಾ’ ಬಿಡುಗಡೆಯ ಅನಂತರ ಎಂಟು ತಿಂಗಳ ಕಾಲ ಸಲ್ಮಾನ್ ಬಳಿ ಯಾವುದೇ ಕೆಲಸ ಇರಲಿಲ್ಲ. ಸೂಪರ್ ಸ್ಟಾರ್ ಆದರೂ ಸಲ್ಮಾನ್ ಗೆ ಬೇರೆ ಫಿಲ್ಮ್ ಬೇಗನೆ ಸಿಗಲಿಲ್ಲ.
ನಂತರ ಸಲ್ಮಾನ್ ತಂದೆ ಸಲೀಮ್ ಖಾನ್ ಒಂದು ರಣನೀತಿಯ ಮೂಲಕ ಸಲ್ಮಾನ್ ಗೆ ಧೈರ್ಯ ತುಂಬಿದರು. ಜಿ ಪಿ ದತ್ತರ ಬಳಿ ಒಂದು ಫಿಲ್ಮ್ ಗೆ ಸಹಿ ಹಾಕಿದ ಘೋಷಣೆಯನ್ನು ಮಾಡಿದರು.
೧೯೯೧ ರಲ್ಲಿ ಸಲ್ಮಾನರ ೨ ನೇ ಹಿಟ್ ಫಿಲ್ಮ್ ’ಸನಮ್ ಬೇವಫಾ’ ಬಂತು.
ಸಾಮಾಜಿಕ ಸೇವೆಯಲ್ಲೂ ಸಲ್ಮಾನ್ ಸಕ್ರಿಯರು. ಬೀಯಿಂಗ್ ಹ್ಯೂಮನ್ ಎಂಬ ಚಾರಿಟಿ ಫೌಂಡೇಶನ್ ನ್ನು ೨೦೦೭ರಲ್ಲಿ ಆರಂಭಿಸಿದ್ದರು.