
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಜ.21: ಇಂದಿನಿಂದ ನಡೆಯುವ ಬಳ್ಳಾರಿ ಉತ್ಸವದ ಅಂಗವಾಗಿ ನಗರದ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿರುವ ಮತ್ಸ್ಯ ಮೇಳ ಸಾಗರದ ಆಳದಲ್ಲಿನ ಮತ್ಯ್ಸ ಸಂಪತ್ತನ ಸೋಜಿಗ ಹಾಗೂ ಕುತೂಹಲವನ್ನು ನೋಡುಗರ ಎದುರು ಅನಾವರಣಗೊಳಿಸಿದಂತಾಗಿದೆ.
ವರ್ಣ ಚಿತ್ತಾರದ ವಿಂಡೋಸ್ :
ಬಿಳಿ, ತಿಳಿ ಗುಲಾಬಿ, ಹಸಿರು ವರ್ಣ ಚಿತ್ತಾರದ ವಿಂಡೋಸ್ ಮೀನುಗಳ ಆಕಾರದಲ್ಲಿ ಚಿಕ್ಕವು. ಗುಂಪು ಗುಂಪಾಗಿ ಇರುವ ಈ ಮೀನುಗಳು ಸಂಯೋಜಿತವಾಗಿ ನೀರಿ ತೊಟ್ಟಿಲ್ಲಿ ಈಜುತ್ತಿವೆ.
ವಿದೇಶಿ ಮೀನುಗಳು:
ಥೈಲ್ಯಾಂಡ್ನ ಲೆಮನ್ ಆಸ್ಕರ್, ಜಪಾನೀಸ್ ಕೋಯಿ ಕಾರ್ಟ್, ಸಿಂಗಾಪುರ ಆಮೆ, ಮಾರಕ ದಂತ ಪಕ್ತಿಯಿಂದ ಕುಖ್ಯಾತವಾಗಿರುವ ಪಿರಾನಾ ಸೇರಿದಂತೆ ಹಲವು ವಿದೇಶಿ ಮೂಲದ ಮೀನಿನ ತಳಿಗಳು ಮತ್ಯ್ಸ ಲೋಕದಲ್ಲಿ ಗಮನ ಸೆಳೆಯುತ್ತಿವೆ.
ಜಲ ಪುಷ್ಪ :
ಸಾಗರ ಆಳದ ಏಂಜಲ್(ದೇವತೆ) ಹಾಗೂ ಫ್ಲೋರಾ(ಪುಷ್ಪ) ಮೀನುಗಳು ವಿವಿಧ ಬಣ್ಣಗಳಲ್ಲಿವೆ. ಗೃಹ ಬಳಕೆಯ ಅಕ್ವೇರಿಯಂನಲ್ಲಿ ಕಂಗೊಳಿಸುವ ಈ ಮೀನುಗಳು ಮನೆಯ ಅಂದ ಹೆಚ್ಚಿಸಲಿವೆ
ಕ್ಯಾಟ್, ಕೋಯಿ ಕಾರ್ಮ್, ಟೈಗರ್ ಆಸ್ಕರ್, ಕ್ಲಾನ್ , ರೆಡ್ ಕ್ಯಾಪ್ ಗೋಲ್ಡ್, ಲಯನ್ ಹೆಡ್, ಫೈಟರ್, ರೆಡ್ ಸ್ಪಾಟ್ ಸ್ಪೋರಮ್, ಚಿಚಲಟ್ಸ್, ಸ್ಟಾಲ್, ಮಲಾಬಿ ಗೊರಮೆ, ಕ್ಲಾನ್, ಶಕರ್ ಕ್ಯಾಟ್, ಸ್ನೇಕ್ ಹಡ್, ಡಿಸ್ಕಸ್, ಪೈರ್ ರೆಡ್ ಆ್ಯಶಲರ್, ಹನಿ(ಜೇನು) ಹಾಗೂ ಪರ್ಲ್ (ಮುತ್ತಿ) ಬಣ್ಣದ ಗ್ರೂಮೆ ಹಾಗೂ ನಕ್ಷತ್ರ ಮೀನು ಸೇರಿ ಒಟ್ಟು 48ಕ್ಕೂ ಹೆಚ್ಚಿನ ತಳಿಯ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.