ಮುನಿಸಿಪಲ್ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಸಿಕೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.14: ನಗರದ ಮುನಿಷಿಪಲ್ ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ನಡೆದಿದೆ.
ನಿನ್ನೆಯಿಂದ ಈ ಕಾರ್ಯ ನಡೆದಿದೆ ಎಂದು ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ, ಬಿಜೆಪಿ ನಗರ ಮಾಧ್ಯಮ ಸಂಚಾಲಕ ತೊಗರಿ  ರಾಜೀವ್, ಕಾಲೇಜಿನ ಪ್ರಾಂಶುಪಾಲ ಕೆ.ವೆಂಕಟರೆಡ್ಡಿ ತಿಳಿಸಿದ್ದಾರೆ.
ಕಾಲೇಜಿನಲ್ಲಿ 2500 ವಿದ್ಯಾರ್ಥಿಗಳಿದ್ದು. ನಿನ್ನೆ 350 ವಿದ್ಯಾರ್ಥಿಗಳಿಗೆ,  ಇಂದು ಒಂದು ಸಾವಿರ ವಿದ್ಯಾರ್ಥಿಗಳಿಗೆ
ಲಸಿಕೆ ನೀಡಲಾಗುತ್ತಿದ್ದು ಈ ಕಾರ್ಯದಲ್ಲಿ  ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಚೇತನ, ಕವಿತಾ, ಸುಧಾ ಮಂಜುಳಾ, ಗಿರಿಜಾ ಡಾ. ಶಶಿಕುಮಾರ್ ಮೊದಲಾದವರು ಲಸಿಕಾ ಕಾರ್ಯದಲ್ಲಿ  ಪಾಲ್ಗೊಂಡಿದ್ದರು