ಮುನಿಷಿಪಲ್ ಹೈಸ್ಕೂಲ್ ಹಳೇ ವಿದ್ಯಾರ್ಥಿಗಳ ಸ್ನೇಹ ಮಿಲನ


(ಸಂಜೆವಾಣಿ  ವಾರ್ತೆ)
ಬಳ್ಳಾರಿ, ಜು.25: ನಗರದ  ಮುನಿಸಿಪಲ್  ಹೈಸ್ಕೂಲಿನ 86-87 ನೇ ಸಾಲಿನ  ಎಸ್ ಎಸ್ ಎಲ್ ಸಿಯ  ಡಿ ಸೆಕ್ಷನ್ ನ  ಹಳೆ  ವಿದ್ಯಾರ್ಥಿಗಳು  ಸ್ನೇಹ ಮಿಲನ ಕಾರ್ಯಕ್ರಮ ಮತ್ತು ಗುರುವಂದನೆ ನಿನ್ನೆ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆಯಿತು.
ತಮಗೆ ಪಾಠ ಮಾಡಿದ್ದ ಮಲ್ಲಣ್ಣ, ಗವಿಸಿದ್ದಪ್ಪ, ವಿಜಯಲಕ್ಷ್ಮಿ ಮೊದಲಾದ  ಶಿಕ್ಷಕರಿಗೆ ಶಾಲು ಹೂವಿನ ಹಾರ ಫಲಪುಷ್ಪಲದಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು.
 ಹಳೆ ವಿದ್ಯಾರ್ಥಿಗಳಾದ ರಾಜುಬಾಬು, ಲಕ್ಷ್ಮಣ, ಗವಿಸಿದ್ದ, ರವೀಂದ್ರ ರೆಡ್ಡಿ, ಶಿವಶಂಕರ್, ಶ್ರೀನಿವಾಸ, ಆನಂದ, ರೆಹ್ಮತುಲ್ಲಾ, ಅಬ್ದುಲ್ ಕಪೂರ್, ಅಬ್ದುಲ್ಲ, ಶಬನ, ಶ್ರೀದೇವಿ, ನಂದ, ಜಂಬಣ್ಣ, ಬಳ್ಳಾರಿಪ್ಪ ಅರುಣ್ ಕುಮಾರ್, ಗೋವಿಂದರಾಜುಲು, ರಾಂಪುರ ಶ್ರೀನಿವಾಸ್, ಶರ್ಮಾಸ್  ತಮ್ಮ ತಮ್ಮ 36 ವರ್ಷದ ಜೀವನ‌ ಪಯಣದ ಅನುಭವಗಳನ್ನು ಹಂಚಿಕೊಂಡರು. 
ಪ್ರಾರ್ಥನೆಯನ್ನು ಜಂಬಣ್ಣ ಶ್ರೀಧರ ಗಡ್ಡೆ ನೆರವೇರಿಸಿದರು, ಭೂಮಾಪನ‌ ನೌಕರ ಬಳ್ಳಾರಪ್ಪ  ಸ್ವಾಗತಿಸಿದರು.  ವಂದನಾರ್ಪಣೆಯನ್ನು ಜಿ ಶಿವಶಂಕರ್ ನೆರವೇರಿಸಿದರು.