ಮುನಿರಾಬಾದ್ ಮುಖ್ಯ ಇಂಜಿನಿಯರ್ ಭೇಟಿ-ದುರುಗಪ್ಪ ನಾಯಕ

ಸಿರವಾರ.ಸೆ.೨೧- ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸಲಾಗುವುದು ಯಾವುದೆ ಆತಂಕ ಬೇಡಾ ನೀರು ಬಿಡಲಾಗಿದೆ ಎಂದು ಮುನಿರಾಬಾದ್ ಮುಖ್ಯ ಅಭಿಯಂತರರಾದ ದುರುಗಪ್ಪ ನಾಯಕ ಹೇಳಿದರು.
ಪಟ್ಟಣದ ಹೊರವಲಯದ ಮೈಲ್ ೯೦ಕ್ಕೆ ಭೇಟಿನೀಡಿ ಮಾನ್ವಿ, ಸಿರವಾರ, ರಾಯಚೂರು ಜಿಲ್ಲೆಯ ರೈತರ ಹೊಲ ಗದ್ದೆಗಳಿಗೆ ನೀರು ಹರಿಸಲಾಗುತ್ತದೆ ಯಾವುದೆ ಆತಂಕ ಬೇಡ ಸೇತುವೆ ಕಾಮಗಾರಿ ಯಿಂದ ನೀರು ಹರಿಸಲು ಸಮಸ್ಯೆಯಾಗಿತು ಎರಡು ದಿನಗಳಿಂದ ನೀರು ಬಿಡಲಾಗಿದೆ, ಸಮರ್ಪಕ ಗೇಜ್ ನೀಡಲಾಗುವದು ರೈತರು ಸಹಕರಿಸಲು ಮನವಿ ಮಾಡಿ, ನೀರಾವರಿ ಅಧಿಕಾರಿಗಳಿಗೆ ನೀರು ನಿರ್ವಹಣೆ ಕೆಲಸ ಸರಿಯಾಗಿ ಮಾಡಿ, ರೈತರ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿ ಎಂದು ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಸೂಚಿಸಿದರು.
ಮಾಜಿ ಶಾಸಕ ಹಂಪಯ್ಯ ನಾಯಕ, ಶಂಕರಗೌಡ ಹರವಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಚಾಗಭಾವಿ ಕೆಳಭಾಗದ ರೈತರು ಭತ್ತ ನಾಡಿಮಾಡಿ, ಗೊಬ್ಬರ ಹಾಕಿದ್ದಾರೆ, ನೀರು ಇಲ್ಲದೆ ಒಣಗಿವೆ, ಬೇಗನೆ ನೀರು ಬಿಡಬೇಕು ಇಲ್ಲವಾದಲ್ಲಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನೀತಾ ಬಸವರಾಜ ಮಂತ್ರಿ, ಶಿವಕುಮಾರ್, ಹಳ್ಳಿ ಹೊಸೂರು, ಯರಮರಸ್ ಅಧೀಕ್ಷಕ ಅಭಿಯಂತರ ಸೂರ್ಯಕಾಂತ, ಎಇಇ ಶರಣಪ್ಪ ನಾಯಕ, ವಿಜಯಲಕ್ಷ್ಮಿ, ವೀರಭದ್ರಗೌಡ ಕೂಟ್ನೇಕಲ್, ಸಣ್ಣ ಬಸನಗೌಡ ಬ್ಯಾಗವಾಟ, ಶರಣಗೌಡ ಚಾಗಭಾವಿ ಸೇರಿದಂತೆ ಅನೇಕರು ಇದ್ದರು.