ಮುನವಳ್ಳಿಯಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಂಡ ಅಧಿಕಾರಿಗಳು

ಮುನವಳ್ಳಿ,ಜು.25: ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಹಾನಿಕರ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಪುರಸಭೆಯವರು ಬಜಾರದಲ್ಲಿಯ ಅಂಗಡಿಗಳಿಗೆ ಭೇಟಿ ನೀಡಿ ಕಳಪೆ ಮಟ್ಟದ 82 ಕೆಜಿ ಯಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡು ಕಳಪೆ ಮಟ್ಟದ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ವ್ಯಾಪಾರಸ್ತರಿಗೆ ಎಚ್ಚರಿಕೆ ನೀಡಿ ದಂಡ ಹಾಕುವ ಕೆಲಸ ಮಾಡಿದರು.
ಮುಖ್ಯಾಧಿಕಾರಿ ರಮೇಶ ಹಿಟ್ಟನಗಿ, ಕಿರಿಯ ಆರೋಗ್ಯ ನಿರಿಕ್ಷಕ ಮನೊಹರ ಅಜಮನಿ, ಸಿಬ್ಬಂದಿಗಳಾದ ಬಸ್ಸು ಹಣಸಿ ಮತ್ತು ಪಾಗಾದ ಸುರೇಶ ಜಂಬಗಿ, ಪಂಚಪ್ಪ ಜಂಬಗಿ, ಪ್ರವಿನ ನಲವಡೆ, ಆನಂದ ಮೂರಗೋಡ, ವಿಠ್ಠಲ ಹಿರೆಮೇತ್ರಿ, ಕಾಶಪ್ಪ ಜಂಬಗಿ, ದ್ಯಾಮಶೆ ಭಜಂತ್ರಿ ಇತರರು ಉಪಸ್ಥಿತರಿದ್ದರು.