ಮುನವಳ್ಳಿಯಲ್ಲಿ ಕಬ್ಬಿನ ಬೆಳೆಯ ಕ್ಷೇತ್ರೋತ್ಸವ


ಮುನವಳ್ಳಿ,ನ.9- ಪಟ್ಟಣದ ಶ್ರೀ ರೇಣುಕಾ ಶುಗರ್ಸ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಬಡ್ಲಿ ಗ್ರಾಮದ ಶ್ರೀ ನಿಂಗಪ್ಪ ಮೇಟಿ ಯವರ ಕಬ್ಬಿನ ತೋಟದಲ್ಲಿ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯದ ಯೋಜನೆಯಡಿಯಲ್ಲಿ ರೈತರ ಸಾಲಿ ಡ್ಯಾರಿಡಾಡ್ ಸಂಸ್ಥೆಯ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಒಂದು ಎಕ್ಕರೆ ಪ್ರದೇಶದಲ್ಲಿ ಒಂದು ಟನ್‍ಗೂ ಅಧಿಕ ಕಬ್ಬಿನ ಇಳುವರಿಯನ್ನು ಪಡೆಯುವ ನಿರೀಕ್ಷೆಯಲ್ಲಿ ಕಬ್ಬಿನ ಬೆಳೆಯ ಕ್ಷೇತ್ರೋತ್ಸವ ಜರುಗಿತು.
ಡಿ.ಐಯ್.ಹೆಗಡೆ ಮಾತನಾಡಿ ಈ ಯೋಜನೆಯಲ್ಲಿ ಕೋಕಾ ಕೋಲಾ ಫೌಂಡೇಶನ್ ಮತ್ತು ರೇಣುಕಾ ಶುಗರ್ಸ ಸಂಸ್ಥೆಯೊಂದಿಗೆ ಸಾಲಿಡ್ಯಾರಿಡಾಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ರೈತರು ಕಬ್ಬು ಬೆಳೆಯಲು ಮಾಡುತ್ತಿರುವ ಖರ್ಚನ್ನು ಕಡಿಮೆ ಮಾಡುತ್ತ ಹೆಚ್ಚು ಇಳುವರಿ ತೆಗೆಯುವ ಬಗೆಗೆ ಮಾರ್ಗದರ್ಶನ ನೀಡುತ್ತಿರುವದಾಗಿ ಅದರೊಂದಿಗೆ ಹೆಚ್ಚು ರಾಸಾಯನಿಕ ಗೊಬ್ಬರದ ಬಳಕೆ ಹಾಗೂ ರವದಿ ಸುಡುವುದರಿಂದಾಗುವ ವಾತಾವರಣ ಮಾಲಿನ್ಯವನ್ನು ತಡೆಗಟ್ಟುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.
ರೇಣುಕಾ ಶುಗರ್ಸನ ಹಿರಿಯ ಜನರಲ್ ಮ್ಯಾನೇಜರ ಐ.ಎಸ್.ಪಾಟೀಲ ಮಾತನಾಡಿ ಹೆಚ್ಚು ರೈತರು ಈ ಮಾರ್ಗದರ್ಶನದ ಉಪಯೋಗ ಪಡೆದುಕೊಳ್ಳ ಬೇಕು ಇದಲ್ಲದೆ ಇನ್ನೂ ಹೆಚ್ಚಿನ ಅನುಕೂಲಗಳನ್ನು ರೈತರಿಗೆ ಒದಗಹಿಸುವ ನಿಟ್ಟಿನಲ್ಲಿ ಸಂಸ್ಥೆಯ ಪ್ರಯತ್ನಿಸುತ್ತಿದೆ ಎಂದರು.
ಎನ್ ಎಸ್ ಮುಗಳಖೋಡ ಮಾತನಾಡಿ ಕಡಿಮೆ ವೆಚ್ಚದಲ್ಲಿ ಕಬ್ಬು ಬೆಳೆಯುವುದು ರೈತರಿಗೆ ಲಾಭಕರ ವಾರ್ಷಿಕ ಅಗತ್ಯತೆಯ ಗೊಬ್ಬರಗಳನ್ನು ಒಮ್ಮೆ ಖರೀದಿಸಿ ಮನೆಯಲ್ಲೆ ದಾಸ್ತಾನು ಮಾಡಿ ಬೇಕಾದಾಗ ಬಳಸುವುದು ಹಾಗೂ ನೀರಾವರಿ ಪದ್ದತಿಯನ್ನು ಬದಲಾಯಿಸಿ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.
ಸಾಲಿಡಾರಿಡ ಸಂಸ್ಥೆಯ ಕ್ಷೇತ್ರ ಸಿಬ್ಬಂದಿಯಾದ ರಾಘವೇಂದ್ರ ಗುದಗಾಪುರ ಅವರು ಸ್ವಾಗತ ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದರು ಕೀಸ್ ಮ್ಯಾನೇಜರ ಸುಧೀರ ಕರೀಕಟ್ಟಿ, ರೇಣುಕಾ ಶುಗರ್ಸ ಸಂಸ್ಥೆಯ ಕ್ಷೇತ್ರ ಸಿಬ್ಬಂದಿಗಳು ಉಪಸ್ಥಿತರಿದ್ದರು.