ಮುಧೋಳ ಮಳಖೇಡ ಬಸ್ಟಾಂಡ್ ಶೌಚಾಲಯಕ್ಕೆ ಬೀಗ;ಸಾರ್ವಜನಿಕರಿಗೆ ತೊಂದರೆ

ಸೇಡಂ,ನ,24: ದೇಶದ ಎಲ್ಲೆಡೆ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಪ್ರತಿಗ್ರಾಮದಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿರುವ ಕೇಂದ್ರ ರಾಜ್ಯ ಸರ್ಕಾರವು ಇನ್ನು ಹಳ್ಳಿಯಲ್ಲಿ ತಲುಪಿಲ್ಲ ಎಂಬುದಕ್ಕೆ ಎರಡು ಬಸ್ಟಾಂಡ್ ಶೌಚಾಲಯಕ್ಕೆ ಬೀಗ ಹಾಕಿರುವುದೇ ಸಾಕ್ಷಿ. ಸ್ವಚ್ಛತೆಗೆ 24/7 ನೀಡುವಂತಹ ಈ ಯೋಜನೆ ಇದ್ದರೂ ಕೂಡ ಜನಸಂಖ್ಯೆ ಹೆಚ್ಚು ತಿರುಗು ವಂತಹ ಬಸ್ ಸ್ಟಾಂಡ್ ನಲ್ಲಿ ಶೌಚಾಲಯಕ್ಕೆ ಬೀಗ ಹಾಕಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಬಸ್ ಘಟಕದ ಅಧಿಕಾರಿಗಳು.
ತಾಲೂಕಿನ ಮೂಧೋಳ ಮಳಖೇಡ ಗ್ರಾಮದ ಬಸ್ ಸ್ಟಾಂಡ್ ನಲ್ಲಿ ಇರುವ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಪ್ರಯಾಣಿಕರಿಗೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಶೌಚಾಲಯಕ್ಕೆ ಹೋಗುವುದಕ್ಕೆ ತೊಂದರೆ ಆಗುತ್ತಿದೆ.
ಗಂಡಸರು ಎಲ್ಲೋಂದರಲ್ಲಿ ಉಚ್ಚೆ ವಯ್ಯುವರು ಹೆಣ್ಣುಮಕ್ಕಳಿಗೆ ಆಗುತ್ತಾ? ಎಂಬುದು ಅಧಿಕಾರಿಗಳು ತಿಳಿದುಕೊಳ್ಳಬೇಕಾಗಿದೆ. ಬಸ್ ಘಟಕ ವ್ಯವಸ್ಥಾಪಕರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜನಪ್ರತಿನಿಧಿಗಳು ತಕ್ಷಣ ಎಚ್ಚೆತ್ತುಕೊಂಡು ಬಸ್ ಸ್ಟಾಂಡ್ ನಲ್ಲಿ ಇರುವ ಶೌಚಾಲಯದ ಬೀಗ ತೆರೆದು ಸೇವೆ ನೀಡಲು ಮುಂದಾಗಬೇಕಾಗಿದೆ.


ಶೌಚಾಲಯು ಸ್ವಚ್ಛತೆ ಇಲ್ಲದೆ ಬಸ್ಟಾಂಡ್ ಒಳಗಡೆ ಎಲ್ಲೋಂದರಲ್ಲಿ ಪ್ರಯಾಣಿಕರು ಗ್ರಾಮಸ್ಥರು ಅಸ್ವಚ್ಛತೆ ಮಾಡುತ್ತಿರುವುದರಿಂದ ದುರ್ನಾತ ಬರುತ್ತದೆ ತಕ್ಷಣ ಅಧಿಕಾರಿಗಳು ಸ್ವಚ್ಛತೆ ಮಾಡಬೇಕು.
ಕೀರ್ತಿ ಕುಮಾರ್
ಅಧ್ಯಕ್ಷರು

ಡಿ ಎಂ ಎಸ್ ಎಸ್ ಮಳಖೇಡ

ಸುಮಾರು ಬಾರಿ ಬಸ್ ಘಟಕದ ವ್ಯವಸ್ಥಾಪಕರಿಗೆ ಶೌಚಾಲಯ ಬೀಗ ತೆಗೆಯುವಂತೆ ಮನವಿ ಮಾಡಿದರು ಇನ್ನುವರೆಗೂ ತೆಗೆದಿಲ್ಲ ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ತೊಂದರೆ ಆಗುತ್ತದೆ.
ರಮೇಶ್ ಇರನಪಲ್ಲಿ ಸಾಮಾಜಿಕ ಕಾರ್ಯಕರ್ತ.