
ಮುಧೋಳ,ಏ.8: ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಹಾಗೂ ಚುನಾವಣೆಗಳು ಭಯಮುಕ್ತವಾಗಿ ನಡೆಯುವ ಸಲುವಾಗಿ ನಗರದ ಸೂಕ್ಷ್ಮ ಪ್ರದೇಶದಲ್ಲಿ ಮಿಲಿಟರಿ ಕಮಾಂಡೊ ಹಾಗೂ ಪೊಲೀಸ ಅಧಿಕಾರಿಗಳಿಂದ ಶುಕ್ರವಾರ ಸಂಜೆ ಪೊಲೀಸ್ ವಾದ್ಯಗಳ ಸಮೇತ ಆಕರ್ಷಕ ಪಥಸಂಚಲನ ನಡೆಯಿತು.
ನಗರದ ಶಿವಾಜಿ, ಗಾಂಧಿ, ಕಲ್ಮೇಶ್ವರ, ಜಡಗಾ ಬಾಲಾ, ಸೈಯ್ಯದಸಾಬ ದರ್ಗಾ ಬಸವೇಶ್ವರ, ಡಾ.ಅಂಬೇಡ್ಕರ್, ಗಡದನ್ನವರ, ಹಾಗೂ ರನ್ನ ಸರ್ಕಲ್‍ಗಳ ಮಾರ್ಗವಾಗಿ ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ಈ ಸಶಸ್ತ್ರ ಮಿಲಿಟರಿ ಕಮಾಂಡೊಗಳ ಹಾಗೂ ಪೊಲೀಸ ಅಧಿಕಾರಿಗಳ ಪಥಸಂಚಲನ ಜನಮನ ಸೆಳೆಯಿತು.
ಚುನಾವಣಾಧಿಕಾರಿ ಸೊಮಲಿಂಗ ಗೆಣ್ಣೂರ ಜಮಖಂಡಿ ಡಿ.ಎಸ್.ಪಿ. ಈ. ಶಾಂತವೀರ, ತಹಶೀಲದಾರ ವಿನೋದ ಹತ್ತಳ್ಳಿ ತಾ.ಪಂ. ಇಓ. ಕಿರಣ ಘೋರ್ಪಡೆ, ಪೋಲೀಸ ಅಧಿಕಾರಿ ಇಂದುಭೂಷಣ ಕುಮಾರ , ಸಿಪಿಐ, ಅಯ್ಯನಗೌಡ ಪಾಟೀಲ, ಪಿಎಸ್‍ಐ. ಸಂಗಮೇಶ ಹೊಸಮನಿ, ಪೌರಾಯುಕ್ತ ಎಸ್.ಜಿ.ಅಂಬಿಗೇರ, ಸೇರಿದಂತೆ 3 ಸಿಪಿಐ. 6 ಪಿ.ಎಸ್.ಐ. 40 ಪಿಸಿ, ಗಳು, 160 ಸಶಸ್ತ್ರ ಸಿಮಾ ಬಲದ ಯೋಧರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.