ಮುದ್ರಣ ಮಾಧ್ಯಮ ತೀವ್ರ ಸಂಕಷ್ಟದಲ್ಲಿ:ಪವನ ಮೇಟಿ

ಕುಕನೂರು, ಜೂ.6- ಎಲೆಕ್ಟ್ರಾನಿಕ್ ಮಾಧ್ಯಮಕ್ಕಿಂತಲೂ ಮುದ್ರಣ ಮಾಧ್ಯಮಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು ಓದುಗರು ಮುದ್ರಣ ಮಾಧ್ಯಮಗಳನ್ನು ಬಲಪಡಿಸುವುದು ಅಗತ್ಯವಿದೆ ಎಂದು ಮುಂಡರಗಿ ಪುರಸಭೆ ಸದಸ್ಯ ಹಾಗೂ ತೇಜಸ್ವಿ ಸೂರ್ಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಪವನಕುಮಾರ ಮೇಟಿ ಹೇಳಿದರು. ಅವರು ಭಾನುವಾರ ಇಲ್ಲಿಯ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದವರಿಗೆ ಹಾಗೂ ಆಟೋ ಚಾಲಕರ ಸಂಘದವರಿಗೆ ಬಿಜೆಪಿ ಮುಖಂಡ ಅಣ್ಣಾ ಮಲೈ ಹುಟ್ಟು ಹಬ್ಬದ ನಿಮಿತ್ಯ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು. ಪ್ರಸ್ತುತ ಕೋವಿಡ್ 19 ರ ಸನ್ನಿವೆಶದಲ್ಲಿ ಪತ್ರಕರ್ತರು ಮತ್ತು ಇತರೆ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ನಾವೆಲ್ಲ ಕೈಲಾದ ಮಟ್ಟಿಗೆ ಶಕ್ತಿ ಚೈತನ್ಯ ನೀಡಿ ಬೆಂಬಲಿಸುವುದು ತೀರಾ ಅಗತ್ಯವಿದೆ. ಮಾಧ್ಯಮಗಳಲ್ಲಿ ಎಲೆಕ್ಟ್ರಾನಿಕ್ ಕ್ಕಿಂತ ಮುದ್ರಣ ಮಾಧ್ಯಮಗಳ ಜನರಿಗೆ ಅತ್ಯಂತ ಪ್ರಭಾವಿಶಾಲಿಯಾಗಿದೆ, ಗ್ರಾಮೀಣ ಜನರ ಬದುಕನ್ನು ಹಸನು ಮಾಡಲು ಮುದ್ರಣ ಮಾಧ್ಯಮ ಪರಿಣಾಮಕಾರಿಯಾಗಿ ಕೆಲಸಮಾಡುತ್ತಿದೆ. ತಾಲೂಕು ಮಟ್ಟದ ವರದಿಗಾರರು ತಮ್ಮ ಅಭಿಮಾನಿಗಳ ಬಳಗವು ಸದಾ ಕೈಲಾದ ಮಟ್ಟಿಗೆ ಸೇವೆ ಸಲ್ಲಿಸುತ್ತಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೊಟ್ರಪ್ಪ ಮುತ್ತಾಳ, ಕರಿಬಸಯ್ಯ ಬಿನ್ನಾಳ, ಪತ್ರಕರ್ತ ನಾಗರಾಜ ಬೆಣಕಲ್ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರುದ್ರಪ್ಪ ಭಂಡಾರಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ವಿವಿಧ ಕಾರಣಗಳಿಂದ ದೂರಾಗಿದ್ದ ಪತ್ರಕರ್ತರ ಮನಸ್ಸುಗಳನ್ನು ದಾನಿಗಳು ಒಂದು ಮಾಡಿದ್ದು ಸಂತಸ ತಂದಿದೆ, ಪತ್ರಕರ್ತರು ಒಗ್ಗಟ್ಟಿನಿಂದ ಬಾಳಿದರೆ ಏನೆಲ್ಲ ಸಾಧಿಸಬಹುದು ಜತೆಗೆ ಉತ್ತಮ ಆರೋಗ್ಯ ಮತ್ತು ಜನರೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಒಂದುಗೂಡಲು ಸಹಕಾರಿ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಕೊಟ್ರಪ್ಪ ಮುತ್ತಾಳ, ಕರಿಬಸಯ್ಯ ಬಿನ್ನಾಳ, ಪತ್ರಕರ್ತ ನಾಗರಾಜ ಬೆಣಕಲ್ ಮಾತನಾಡಿದರು.
ವೇದಿಕೆಯಲ್ಲಿ ಮುಖಂಡರಾದ ಮಂಗಳೇಶ ಮಂಗಳೂರು, ಬಸವರಾಜ ಹಾಳಕೇರಿ, ಬಸವರಾಜ ಮೇಟಿ,ಲಕ್ಷ್ಮಣ ಕಾಳಿ, ಮಲ್ಲಿಕಾರ್ಜುನ ಜಂತ್ಲಿ, ರಾಘವೇಂದ್ರ ಕುಲಕರ್ಣಿ, ಪ್ರಮೋದ ಕುರ್ತಿ,ರಮೇಶ ಶಾಸ್ತ್ರಿ , ಶಶಿ ಭಜಂತ್ರಿ ಮೊದಲಾದವರು ಇದ್ದರು. ಪತ್ರಕರ್ತ ಮುರಾರಿ ಭಜಂತ್ರಿ ಸ್ವಾಗತಿಸಿ ನಿರೂಪಿಸಿದರು.