
ಯುವ ನಟ ಧನ್ವೀರ್ ಗೌಡ ರೀಷ್ಮಾ ನಾಣಯ್ಯ ಜೋಡಿಯ “ವಾಮನ” ಚಿತ್ರದ ಮುದ್ದು ರಾಕ್ಷಸಿ ಹಾಡು ಬಿಡುಗಡೆಯಾಗಿದೆ. ಯುವ ನಟ ಅಭಿಷೇಕ್ ಅಂಬರೀಷ್ ಹಾಡು ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ವಾ..ವಾ..ವಾ..ವಾಮನ ಹಾಡಿನ ಬಳಿಕ ಮುದ್ದು ರಾಕ್ಷಸಿ ಹಾಡು ಬಿಡುಗಡೆಯಾಗಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಹಾಡಿದ್ದಾರೆ. ಚೇತನ್ ಗೌಡ” ನಿರ್ಮಿಸಿರುವ ಚಿತ್ರವನ್ನು ಯುವ ನಿರ್ದೇಶಕ “ಶಂಕರ್ ರಾಮನ್” ನಿರ್ದೇಶಿಸಿದ್ದಾರೆ.
ಅಭಿಷೇಕ್ ಅಂಬರೀಷ್ ಮಾತನಾಡಿ, ಹಾಡು ಯಶಸ್ಸಿಯಾಗಬೇಕಾದರೆ ಅದರ ಕ್ರೆಡಿಟ್ ಹಿಟ್ ಆಗಬೇಕು ಅಂದರೆ ಅದರ ಕ್ರೆಡಿಟ್ ಹೀರೋಗೂ ಅಲ್ಲ ಹೀರೋಯಿನ್ ಗೂ ಅಲ್ಲ. ಮ್ಯೂಸಿಕ್ ಡೈರೆಕ್ಟರ್, ಲಿರಿಕ್ಸಿಸ್ಟ್ ಗೆ. ಅವರ ಎಫರ್ಟ್ ಜಾಸ್ತಿ ಇರುತ್ತದೆ. ನಮ್ಮ ಧನ್ವೀರ್ ಇಷ್ಟು ಚೆನ್ನಾಗಿ ರೋಮ್ಯಾನ್ಸ್ ಮಾಡ್ತಾನೆ ಗೊತ್ತಿರಲಿಲ್ಲ. ಬೈ ಟು ಲವ್ ಸಿನಿಮಾದಲ್ಲಿ ಸ್ವಲ್ಪ ನೋಡಿದ್ದೇವು. ಈಗ ವಾಮನ ಮುಖಾಂತರ ಕಂಪ್ಲೀಟ್ ಕಮರ್ಷಿಯಲ್ ಪ್ಯಾಕೇಜ್, ಕ್ಯೂಟ್ ಲವರ್ ಬಾಯ್ ರೀತಿ ಕಾಣಿಸುತ್ತಿದ್ದಾನೆ ಎಂದರು.
ಧ್ವನೀರ್ ಗೌಡ ಮಾತನಾಡಿ, ವಿದೇಶಕ್ಕೆ ಕರೆದುಕೊಂಡು ಹೋಗಿ ಡ್ಯಾನ್ಸ್ ಮಾಡಿ ಅಂದರು.ಮಾಡಿದ್ದೇನೆ ಎಂದರೆ ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ಮೊದಲ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಈ ಸಾಂಗ್ ನಿಮಗೆ ಡೆಡಿಕೇಟ್ ಗೆ ಮಾಡುತ್ತಿದ್ದೇವೆ ಎಂದರು