ಮುದ್ದಳ್ಳಿ ಗೇಟ್ ಬಳಿ ಬಸ್ ನಿಲ್ಲಿಸಲು ಒತ್ತಾಯ ರೈತರಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ
ನಂಜನಗೂಡು: ಫೆ.01:- ತಾಲೂಕಿನ ಮುದ್ದಳ್ಳಿ ಗೇಟ್ ಬಳಿ ಸರ್ಕಾರಿ ಬಸ್ಸುಗಳು ನಿಲ್ಲಿಸದಿರುವ ಕಾರಣ ವಾಹನಗಳನ್ನು ತಡೆದು ರೈತ ಸಂಘಟನೆ ಪ್ರತಿಭಟನೆ ನಡೆಸಿದರು.
ಈ ಗೇಟ್ ಬಳಿಗೆ ಸುಮಾರು ನಾಲ್ಕರಿಂದ ಐದು ಗ್ರಾಮಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬಂದು ಬಸ್ಸಿಗಾಗಿ ನಿಲ್ಲುತ್ತಾರೆ ಇದರ ಜೊತೆಗೆ ಸಾರ್ವಜನಿಕರು ಹಾಗೂ ರೈತರು ಓಡಾಡಲು ತೊಂದರೆಯಾಗುತ್ತಿದೆ ಆದ್ದರಿಂದ ಈ ಕೇಟ್ ಬಳಿ ಬಸುಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು
ಗುಂಡ್ಲುಪೇಟೆ ಹಾಗೂ ಮೈಸೂರು ಕಡೆ ಹೋಗುವ ಬರುವಬಸ್ಸುಗಳು ಅಧಿಕೃತವಾಗಿ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯ ರಾಜು ರವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ರೈತ ಮುಖಂಡರು ಅಕ್ಕಪಕ್ಕದ ಗ್ರಾಮದ ಮುಖಂಡರು ಸಿಂಧುವಳ್ಳಿ ಕುರಹಟ್ಟಿ ಮುದ್ದಹಳ್ಳಿ ಇತರ ಗ್ರಾಮದ ಸಾರ್ವಜನಿಕರು ರಸ್ತೆ ತಡೆ ಚಳುವಳಿಯನ್ನು ಮಾಡಲಾಯಿತು
ಪೆÇೀಲಿಸ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ನಂಜನಗೂಡು ಡಿಪೆÇೀ ವ್ಯವಸ್ಥಾಪಕರು ತ್ಯಾಗರಾಜು ಅವರ ಜೊತೆ ರೈತ ಮುಖಂಡರನ್ನು ಕರೆಸಿ ಇನ್ನು ಮುಂದೆ ಈ ರೀತಿ ಆಗಬಾರದೆಂದು ಭರವಸೆ ನೀಡಿದರು ನಾಳೆಯಿಂದ ಪ್ರತಿಯೊಂದು ಬಸ್ಸುಗಳು ನಿಲ್ಲಿಸಬೇಕೆಂದು ಅವರಿಗೆ ತಿಳಿಸಿಕೊಡುತ್ತೇವೆ ಎಂದು ತ್ಯಾಗರಾಜರವರು ಬರವಸೆ ನೀಡಿದರು ಇವರ ಮಾತಿಗೆ ಒ ಗುಟ್ಟು ಪ್ರತಿಭಟನೆಯನ್ನು ಹಿಂಪಡೆದರು
ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ ಹಾಡ್ಯ ರವಿ ಕೆರೆಹುಂಡಿ ರಾಜಣ್ಣ ಬನ್ನೂರು ಸ್ವಾಮಿರಾಜ್ ಮೂಡಲಪುರ ನಾಗರಾಜ್ ಚಿಕ್ಕ ಸ್ವಾಮಿ ರೇವಣ್ಣ ಶಿವಣ್ಣ ಸೋಮು ಕುರಹಟ್ಟಿ ಗುರುಸ್ವಾಮಿ ಚಂದ್ರವಾಡಿ ಆನಂದು ಅರಳಿಕಟ್ಟೆ ಕುಮಾರ್ ಕೆಳ್ಳಿಪುರ ಶ್ರೀಕಂಠ ಮಾಲೂರು ಹರ್ಷಕುಮಾರ್ ಬಸವರಾಜಪ್ಪ ಮಹೇಂದ್ರ ಶಿವಣ್ಣನಾ ಮಾದೇವ ನಾಯಕ ಯಕ ಭುಜಂಗಪ್ಪ ನಾಗೇಂದ್ರ ಸ್ವಾಮಿ ಅಂಡುವಿನಹಳ್ಳಿ ರವಿ ಇನ್ನು ಮುಂತಾದ ರೈತ ಮುಖಂಡರುಗಳು ನೂರಕ್ಕೂ ಹೆಚ್ಚು ರೈತರ ಭಾಗವಹಿಸಿದ್ದರು