ಮುದ್ದಟನೂರು ಗ್ರಾಮದ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜು 26. ಸಮೀಪದ ಮುದ್ದಟನೂರು ಗ್ರಾಮ ಪಂಚಾಯಿತಿಗೆ ಎರಡುವರೆ ವರ್ಷದ 2ನೇ ಅವಧಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಉಪಾಧ್ಯರ ಆಯ್ಕೆ ಪ್ರಕ್ರಿಯೆಗೆ ಜು.24ರಂದು ಚುನಾವಣೆ ನಡೆಯಿತು. 21 ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಯನ್ನು ಹೊಂದಿದ್ದ ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಜಾತಿ(ಎಸ್‍ಸಿ) ಗೆ ಮೀಸಲಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಮಾಳಾಪುರ ಗ್ರಾಮದ ಶ್ರೀಮತಿ ಕೆ.ಹುಲಿಗೆಮ್ಮದುರುಗಪ್ಪ. ಮತ್ತು ಸಾಮಾನ್ಯ (ಜನರಲ್) ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಗುಂಡಿಗನೂರು ಗ್ರಾಮದ ಶ್ರೀಮತಿ ಶಾರದಮ್ಮಶೇಕಣ್ಣ ಇವರು ಅವಿರೋಧವಾಗಿ ಆಯ್ಕೆಯಾದರು. ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್.ಬಿ.ಪಾಟಿಲ್ ಅಧಿಕೃತವಾಗಿ ಘೋಷಿಸಿದರು. ಪಿಡಿಓ ಬಸವರಾಜ ಮತ್ತು ಸಿಬ್ಬಂದಿಯವರು ಚುನಾವಣೆ ಪ್ರಕ್ರಿಯೆ ನಡೆಸಿದರು. ನಂತರ ಆಯ್ಕೆಗೊಂಡ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಅಧ್ಯಕ್ಷರು ಉಪಾಧ್ಯಕ್ಷರು, ಮುಖಂಡರು ಸನ್ಮಾನಿಸಿ ಗೌರವಿಸಿದರು.

One attachment • Scanned by Gmail