ಮುದೋಳ ತಾಲೂಕು ಉಪ ಖಜಾನೆ ಅಧಿಕಾರಿ ಮೇಲೆ ಹಲ್ಲೆ ಖಂಡಿಸಿ ರಾಜ್ಯಸರ್ಕಾರಕ್ಕೆ ಮನವಿ

ಕೊಟ್ಟೂರು ಸೆ 16 :ಸಹಾಯಕ ಕೃಷಿ ಇಲಾಖೆ ನಿರ್ದೇಶಕರು ಹಾಗೂ ಉಪನಿರ್ದೇಶಕರು ಮಧ್ಯಾ್ಹ್ನ 4.30ರ ನಂತರ ಕಛೇರಿಗೆ ಆಗಮಿಸಿ ಬಿಲ್ ಪಾಸ್ ಮಾಡಿಸಲು ಒತ್ತಾಯಿಸಿದ್ದು, ಖಜಾನೆ-2 ತಂತ್ರಾಂಶದಲ್ಲಿ ಮಧ್ಯಾಹ್ನ 2.30 ರ ನಂತರ ಪಡೆಯಲು ಅವಕಾಶ ಇಲ್ಲವೆಂದು ತಿಳಿ ಹೇಳಿದರೂ ಕೇಳದೇ, ಉಪ ಖಜಾನೆ ಅಧಿಕಾರಿಗಳ ಮೇಲೆ ಕೈಮಾಡಿ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿರುತ್ತಾರೆ. ಈ ಘಟನೆಯನ್ನು ಖಂಡಿಸಿ, ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಟ್ಟೂರು ಘಟಕ ಇವರು ಶ್ರೀ ಅನಿಲ್ ಕುಮಾರ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಈ ಸಮಯದಲ್ಲಿ ಎಸ್ ಎಂ ಸುಜಾತ, ಸಹಾಯಕ ಖಜಾನಾಧಿಕಾರಿಗಳು; ತನುಜಾ ಪಾಟೀಲ್, ಮುಖ್ಯ ಲೆಕ್ಕಿಗರು; ಕವಿತ ಪ್ರದಸ ಹಾಗೂ ಎಸ್ ವಿ ಬಸವರಾಜ ರಾಜ್ಯ ಪರಿಷತ್ ಸದಸ್ಯರು, ಸಿದ್ದಪ್ಪ ಕಾರ್ಯದರ್ಶಿ, ಬಸವರಾಜ ಎಪಿಎಂಸಿ ಕಾರ್ಯದರ್ಶಿ, ಕೆಂಚಪ್ಪ ತಾ.ಪಂ. ಎ.ಡಿ. ಹಾಗೂ ಇತರರು ಇದ್ದರು.