ಮುದುಕಪ್ಪಗೆ ಪಿ.ಹೆಚ್.ಡಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಅ.11: ತಾಲ್ಲೂಕಿನ ರಾವಿಹಾಳ್ ಗ್ರಾಮದ ಶಿಕ್ಷಕ ಕೆ.ಮುದುಕಪ್ಪ ಅವರಿಗೆ ಕನ್ನಡ ವಿಶ್ವ ವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ.
ವಿಜಯನಗರ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಶಿವಪುತ್ರಪೋತಲಕರ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿವಿ ಅಭಿವೃದ್ದಿ ಅಧ್ಯಯನ ವಿಭಾಗದಿಂದ ‘ಪೌರ ಕಾರ್ಮಿಕರ ಪರಿಸರ ಮತ್ತು ಪರಿಸ್ಥಿತಿ’ ಎನ್ನುವ ವಿಷಯದ ಮೇಲೆ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದರೆ.