ಮುದಗಲ್ ಮಹಾತ್ಮರ ಹಾಗೂ ರಾಷ್ಟ್ರ ನಾಯಕರ ಹೆಸರನಲ್ಲಿ ವೃತ್ತ ನಿರ್ಮಾಣ

ಮುದಗಲ್.ಜ.೧೨- ಪಟ್ಟಣದಲ್ಲಿ ಮಹಾತ್ಮರ ಹಾಗೂ ರಾಷ್ಟ್ರ ನಾಯಕರ ಹೆಸರನಲ್ಲಿ ವೃತ್ತ ನಿರ್ಮಾಣ.ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿಸಲಸಿದರು.ಮಂಗಳವಾರ ಇದುವರೆಗೂ ಯಾವ ರಸ್ತೆಯಲ್ಲಿಯೋ ಮಹಾತ್ಮರ ಹಾಗೂ ರಾಷ್ಟ್ರ ನಾಯಕರ ಹೆಸರನಲ್ಲಿ ಯಾವ ವೃತ್ತ ಇರುವುದಿಲ್ಲ ಆದ ಕಾರಣ ಐತಿಹಾಸಿಕ ಮುದಗಲ್ ನಲ್ಲಿ ಹಜರತ್ ಇಮಾಮ್ ಹುಸೇನ್ ಆಲಂ ರವರ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್, ಮತ್ತು ಹಜರತ್ ಇಮಾಮ್ ಎ ಹುಸೇನ್ ಆಲಂ, ನಿರುಪಾದೇಶ್ವರ ವೃತ್ತವನ್ನು ನಿರ್ಮಿಸಬೇಕು ಎಂದು ಮುದಗಲ್ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪುರಸಭೆ ಅಧ್ಯಕ್ಷೆ ಅಮೀನಬೇಗಂ ಮಹಿಬೂಬ ಬಾರಿಗಿಡ ಮತ್ತು ಮುಖ್ಯಾಧಿಕಾರಿ ಮರಿಲಿಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪುರಸಭೆ ಸಾಮನ್ಯ ಸಭೆಯಲ್ಲಿ ಚರ್ಚೆ: ಪುರಸಭೆ ಕಾರ್ಯಲಯದಲ್ಲಿ ಮಂಗಳವಾರ ನೆಡೆದ ಸಾಮನ್ಯ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಎಲ್ಲಿ ಎಲ್ಲಿ ಹೆಸರನ್ನು ಸೂಚಿಸಬೇಕು ನೀವು ಹೆಸರನ್ನು ಸೂಚಿಸಿ ಎಂದು ಅಧ್ಯಕ್ಷೆರಿಗೆ ಮತ್ತು ಮುಖ್ಯಾಧಿಕಾರಿ ಗೆ ಹೇಳಿ ಮುಂದಿನ ಸಭೆಯಲ್ಲಿ ತೀರ್ಮಾನಿಸೋಣ ಎಂದರು. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಎಸ್ ಎ ನಯಿಮ್ ಸೇರಿದಂತೆ ಪದಾಧಿಕಾರಿಗಳು ಇದ್ದರು.