ಮುದಗಲ್ ಪುರಸಭೆಗೆ ದಿಢೀರನೆ ಭೇಟಿ ನೀಡಿದ ಶಾಸಕ ಹೂಲಗೇರಿ

ಮುದಗಲ್,ಮಾ.೨೪- ಪಟ್ಟಣದಲ್ಲಿ ಕುಡಿಯುವ ನೀರಿನ ಸಮರ್ಪಕವಾಗಿ ನೀರು ಪೂರೈಕೆ ಆಗದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿರುವ ಕಾರಣ ಶಾಸಕ ಡಿ.ಎಸ್. ಹೂಲಗೇರಿ ಅವರು ಬೆಳಿಗ್ಗೆ ೫:೩೦ ಕ್ಕೆ ದಿಢೀರನೆ ಭೇಟಿ ನೀಡಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ನಾಯಕ ಹಾಗೂ ನೀರಿನ ವಿಭಾಗದ ಅಧಿಕಾರಿ ಮಾಲಿಂಗರಾಯ ಹಾಗೂ ಕೆಲ ಪುರಸಭೆ ಸದಸ್ಯರ ಜೊತೆ ನೀರಿನ ಸಮಸ್ಯೆ ಜೊತೆ ಹಲವಾರು ಸಮಸ್ಯೆ ಬಗ್ಗೆ ಚಚೆ೯ ಮಾಡಿ, ಆದಷ್ಟು ಬೇಗನೆ ನೀರಿನ ಸಮಸ್ಯೆ ಬಗೆಹರಿಸಲು ಲಿಂಗಸುಗೂರು ಶಾಸಕರಾದ ಹೂಲಿಗೇರಿ ಖಡಕ್ ಸೂಚನೆ ನೀಡಿದರು.
ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಕೊರತೆ ಜನರಿಗೆ ಸಮಸ್ಯೆ ತರಬಾರದು. ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡುವಂತೆ ಶಾಸಕ ಹೂಲಗೇರಿ ಅಧಿಕಾರಿಗಳಿಗೆ ಸೂಚಿಸಿದ್ದರೂ ಹಾಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಲಿಂಗಸುಗೂರು ಕ್ಷೇತ್ರದ ಶಾಸಕರಾದ ಡಿ.ಎಸ್ ಹೂಲಗೇರಿ, ಪುರಸಭೆ ಮುಖ್ಯಾಧಿಕಾರಿ ಪರುಶುರಾಮ ನಾಯಕ್ ನೀರಿನ ವಿಭಾಗದ ಅಧಿಕಾರಿ ಮಲಿಂಗರಾಯ ಹಾಗೂ ಪುರಸಭೆ ಸದಸ್ಯರಾದ ತಸ್ಲೀಂ ಮುಲ್ಲಾ, ಅಜ್ಮೀರ್ ಸಾಬ ಸೇರಿ ಕಾಂಗ್ರೆಸ್ ಮುಖಂಡರಾದ ಹುಸೇನ್ ಅಲಿ, ಶಂಕ್ರಪ್ಪ ಜೀಡಿ, ಸೈಯದ್ ಸಾಬ ಹಳೆಯ ಪೇಟೆ, ನ್ಯಾಮತ್ ಉಲ್ಲಾ ಖಾದ್ರಿ, ತಮ್ಮಣ್ಣ ಗುತ್ತಿಗೆದಾರ, ಮೈಬೂಬು ಸಾಬ ಬಾರಿ ಗಿಡ, ಕೃಷ್ಣ ಚಲವಾದಿ, ಇತರರು ಉಪಸ್ಥಿತರಿದ್ದರು.